ನೇಣು ಬಿಗಿದು ಕಾಲೇಜು ಯುವತಿ ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕುಂಬ್ಡಾಜೆ ಸಮೀಪದ ಉಬ್ರಂಗಳ ನಿವಾಸಿ, ಬದಿಯಡ್ಕ ಕೋ-ಓಪರೇಟಿವ್ ಕಾಲೇಜಿನ ಮೊದಲ ವರ್ಷದ ಎಂ ಕಾಂ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾಳೆ.

ಉಬ್ರಂಗಳದ ಶ್ರಮಿಕ ಶ್ರೀಧರ ಹಾಗೂ ನಳಿನಿ ದಂಪತಿಯ ಪುತ್ರಿ ರೇಣುಕ (20) ನೇಣು ಬಿಗಿದು ಆತ್ಮಹತ್ಯೆಗೈದ ವಿದ್ಯಾರ್ಥಿನಿ. ಯುವತಿ ಮನೆಯಲ್ಲಿ ಫ್ಯಾನ್ ತೂಗಾಡಿಸುವ ಕೊಂಡಿಗೆ ಚೂಡಿದಾರದ ಶಾಲಿನಿಂದ ನೇಣು ಬಿಗಿದಿದ್ದಾಳೆ.

ಎಲ್ಲರ ಜೊತೆಗೂ ಉತ್ತಮ ಒಡನಾಟವನ್ನು ಹೊಂದಿರುವ ರೇಣುಕ ಆತ್ಮಹತ್ಯೆಗೆ ಶರಣಾಗಿರುವುದು ಸಂಬಂಧಿಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ಬದಿಯಡ್ಕ ಪೆÇೀಲೀಸರು ದೂರು ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.