ಕಡಲಬ್ಬರಕ್ಕೆ ತಡೆಗೋಡೆ ಕುಸಿತ, ಆತಂಕದಲ್ಲಿ ಅಂಕೋಲಾ ಜನತೆ

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : ತಾಲೂಕಿನ ಸಮುದ್ರ ತೀರಗಳಲ್ಲಿ ಮತ್ತು ನದಿಯಂಚಿನ ಪ್ರದೇಶಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿ ಅಲೆಗಳ ಆರ್ಭಟಕ್ಕೆ ವಿವಿಧ ಭಾಗಗಳಲ್ಲಿ ತಡೆಗೋಡೆಗಳು ಕುಸಿದಿದೆ. ಸಹಜವಾಗಿಯೇ ಜನರಲ್ಲಿ ಆತಂಕ ಉಂಟಾಗಿದ್ದು, ಕಡಲ ಅಬ್ಬರ ಇರುವುದರಿಂದಾಗಿ ತೀರ ಪ್ರದೇಶದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

ಮಂಜಗುಣಿ, ಬೆಳಂಬಾರ, ನದಿಭಾಗ, ಕೇಣಿ, ಭಾವಿಕೇರಿ, ಬೇಲೆಕೇರಿ, ಹಾರವಾಡ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತಡೆಗೋಡೆಗಳಿಗೆ ಹಾನಿಯಾಗಿದ್ದು, ಸುಮಾರು 30 ಲಕ್ಷ ರೂಪಾಯಿಗೂ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಮಂಜಗುಣಿ ಭಾಗದಲ್ಲಿ ಕಡಲಬ್ಬರಕ್ಕೆ ತಡೆಗೋಡೆ ಕುಸಿದು ನೀರು ರಸ್ತೆಗೆ ಬರುತ್ತಿರುವುದರಿಂದ ತಹಶೀಲ್ದಾರ ವಿವೇಕ ಶೇಣ್ವಿ, ಕಂದಾಯ ನಿರೀಕ್ಷಕ ಅಮರ ನಾಯ್ಕ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

LEAVE A REPLY