ಪೌರ ಕಾರ್ಮಿಕರಿಗೆ ಹಳೆಯ ನೋಟು ನೀಡುತ್ತಿರುವ ಕೊಯಮತ್ತೂರು ಪಾಲಿಕೆ

ಕೊಯಮತ್ತೂರು : ಕೊಯಮತ್ತೂರು ನಗರಪಾಲಿಕೆಯ ಸುಮಾರು 3,000 ಪೌರ ಕಾರ್ಮಿಕರಿಗೆ ತಿಂಗಳ ವೇತನದಲ್ಲಿ 1,000 ಮತ್ತು 5,00 ರೂ ಹಳೆಯ ನೋಟು ನೀಡಲಾಗಿದ್ದು, ಈ ನೋಟು ಬದಲಾವಣೆಗೆ ಬ್ಯಾಂಕಿನಲ್ಲಿ ಪರದಾಡುವಂತಾಗಿದೆ ಎಂದು ಆರೋಪಿಸಲಾಗಿದೆ.

ನೋಟು ಅಪಮೌಲ್ಯೀಕರಣಕ್ಕಿಂತ ಮುಂಚೆ ಪೌರ ಕಾರ್ಮಿಕರಿಗೆ ಬ್ಯಾಂಕ್ ಖಾತೆಯಲ್ಲಿ ವೇತನ ನೀಡಲಾಗುತ್ತಿತ್ತು. ನಗದು ಸಮಸ್ಯೆಯಿಂದ ಈಗ ಬಹಳಷ್ಟು ಕಾರ್ಮಿಕರು ತೊಂದರೆಗೊಳಗಾಗಿದ್ದಾರೆ. ಹಳೆಯ ನೋಟು ನಿರಾಕರಿಸಿದ ಕಾರ್ಮಿಕರಿಗೆ ಗುತ್ತಿಗೆದಾರರು ಕೆಲಸ ಬಿಡುವಂತೆ ಬೆದರಿಕೆಯೊಡ್ಡುತ್ತಿದ್ದಾರೆ. ಅಲ್ಲದೆ ಈಗಾಗಲೇ ಸಾಕಷ್ಟು ಮಂದಿಗೆ ಬೆದರಿಕೆಯೊಡ್ಡಿ ವೇತನ ಸ್ಲಿಪ್ಪಿಗೆ ಸಹಿ ಹಾಕಿಸಿಕೊಂಡಿದ್ದಾರೆಂದು ಹೇಳಲಾಗಿದೆ.

ಕೆಸಿಟಿ ಮತ್ತು ವಂದನ ಇನ್ಫ್ರಾಸ್ಟ್ರಕ್ಚರ್ ಪ್ರೈ ಲಿಮಿಟೆಡ್ ಕೊಯಮತ್ತೂರು ನಗರಪಾಲಿಕೆಯ ನೈರ್ಮಲ್ಯ ಗುತ್ತಿಗೆ ಪಡೆದುಕೊಂಡಿವೆ. ಈ ಗುತ್ತಿಗೆ ಕಂಪೆನಿಗಳು ಗುತ್ತಿಗೆದಾರರ ನೋಂದಣಿ ಕಾಯ್ದೆಯಡಿ ನೋಂದಾವಣೆಗೊಂಡಿಲ್ಲ. ಗುತ್ತಿಗೆದಾರರಿಂದ ನಡೆಯುತ್ತಿರುವ ಅವ್ಯವಹಾರ ಪಾಲಿಕೆ ಅಧಿಕಾರಿಗಳಿಗೆ ಗೊತ್ತಿದ್ದರೂ, ಪೌರ ಕಾರ್ಮಿಕರ ವಿಷಯದಲ್ಲಿ ಯಾರೂ ಕೇರ್ ತೆಗೆದುಕೊಳ್ಳುತ್ತಿಲ್ಲವೆಂದು ದೂರಲಾಗಿದೆ.