ಕೋಳಿಅಂಕ : 7 ಮಂದಿ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕುಬಣೂರಿನಲ್ಲಿ ನಡೆಯುತ್ತಿದ್ದ ಕೋಳಿಅಂಕಕ್ಕೆ ದಾಳಿ ನಡೆಸಿದ ಪೆÇಲೀಸರು 7 ಮಂದಿಯನ್ನು ಬಂಧಿಸಿ 2 ಕೋಳಿ ಮತ್ತು 7,900 ರೂ ವಶಪಡಿಸಿಕೊಂಡಿದ್ದಾರೆ.

ಉದುಮ ನಿವಾಸಿ ರಾಜೇಶ್ ಕೆ ಪಿ, ಮೊಗ್ರಾಲಿನ ರಮೇಶ್, ಬಂಬ್ರಾಣದ ಜಯರಾಮ ಶೆಟ್ಟಿ, ಮೊಗ್ರಾಲಿನ ವಸಂತ, ಮುಟ್ಟಂಗೇಟಿನ ಸುಬ್ಬಣ್ಣ ಶೆಟ್ಟಿ, ಮೊಗ್ರಾಲ್ ಪುತ್ತೂರಿನ ಸುಬ್ರಹ್ಮಣ್ಯ ಮತ್ತು ಹೇರೂರಿನ ನಾರಾಯಣನನ್ನು ಪೆÇಲೀಸರು ಬಂಧಿಸಿದ್ದಾರೆ.