ಮಾದಕ ವಸ್ತುಗಳ ಕೇಂದ್ರವಾಗುತ್ತಿರುವ ಗಡಿನಾಡ ಪ್ರದೇಶ

 ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕೇರಳ-ಕರ್ನಾಟಕದ ಗಡಿ ಪ್ರದೇಶಗಳು ಕೇರಳ ಹಾಗೂ ಕರ್ನಾಟಕದ ಪ್ರಮುಖ ನಗರಗಳಿಗೆ ಹಾಗೂ ಇತರ ಪ್ರದೇಶಗಳಿಗೆ ಮಾದಕ ವಸ್ತುಗಳನ್ನು ವಿತರಿಸುತ್ತಿರುವ ಗಾಂಜಾ ಕೇಂದ್ರವಾಗುತ್ತಿದೆ

ಮೊದಲು ಕೇರಳದ ಇಡುಕ್ಕಿ ಜಿಲ್ಲೆಯಿಂದ ಗಡಿನಾಡ ಪ್ರದೇಶಕ್ಕೆ ಗಾಂಜಾ ಸೇರಿದಂತೆ ಇತರ ಮಾದಕ ವಸ್ತುಗಳು ಆಗಮಿಸುತ್ತಿದ್ದು,  ಇದೀಗ ಮಾರ್ಪಾಟಾಗಿದೆ. ಸಣ್ಣ ಪ್ರಮಾಣದಲ್ಲಿ ನಡೆಯುತಿದ್ದ ಗಾಂಜಾ ಮಾರಾಟ ಇದೀಗ ರಾಜ್ಯದ ಗಡಿ ಪ್ರದೇಶವನ್ನು ಬಿಟ್ಟು ಆಂಧ್ರ ಪ್ರದೇಶದಿಂದ ಮಾಫಿಯಾಗಳ ಶಕ್ತಿಬಲದಿಂದ ಆಗಮಿಸುತ್ತಿದ್ದು, ಮಾದಕ ವಸ್ತುಗಳು ಕರ್ನಾಟಕ ಹಾಗೂ ಕೇರಳದ ಎಲ್ಲೆಡೆ ವ್ಯಾಪಿಸಿಕೊಂಡಿದೆ.

ಯುವಕರನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿರುವ ಗಾಂಜಾ ಮಾಫಿಯಾಗಳಿಂದ ಯುವ ಸಮೂಹಗಳಲ್ಲಿ ದಿನದಿಂದ ದಿನಕ್ಕೆ ಗಾಂಜಾ ಸೇರಿದಂತೆ ಇತರ ಮಾದಕ ವಸ್ತುಗಳ ಸೇವನೆ ಅಧಿಕವಾಗುತ್ತಿದೆ. ಮಾದಕ ವಸ್ತುಗಳ ದಾಸರಾಗುತ್ತಿರುವ ಯುವಕರನ್ನು ಅರ್ಥ ಮಾಡಿಕೊಳ್ಳಲು ಪೆÇೀಷಕರು ವಿಳಂಬವಾಗುತ್ತಿರುವುದು ಇನ್ನೊಂದು ದುರಂತವೆಂದೇ ಹೇಳಬಹುದು. ಈ ಸಂದರ್ಭದಲ್ಲಿ `ಕರಾವಳಿ ಅಲೆ’ ಮಾದಕ ವಸ್ತುಗಳ ಕೇಂದ್ರವಾಗುತ್ತಿರುವ ಗಡಿನಾಡ ಪ್ರದೇಶ ಎಂಬ ವಿಶೇಷ ಲೇಖನ ಮಾಲೆಯನ್ನು ಪ್ರಕಟಿಸಲಿದೆ.