ಮೇಟಿ ಕಾಮಪುರಾಣ ಸೀಎಂಗೆ ಮೊದಲೇ ಗೊತ್ತಿತ್ತು : ಎಚ್ಡೀಕೆ

ಬೆಂಗಳೂರು : ಅಬಕಾರಿ ಸಚಿವ ಎಚ್ ವೈ ಮೇಟಿಯ ಕಾಮಪುರಾಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೊದಲೇ ಮಾಹಿತಿ ಇತ್ತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಮೇಟಿ ಅವರ ಕಾಮಪುರಾಣದ ವಿಡಿಯೋ ಸೀಡಿ ಬಹಿರಂಗಪಡಿಸುವ ಅವಶ್ಯಕತೆ ರಾಜ್ಯ ಸರಕಾರಕ್ಕೆ ಇತ್ತಾ ? ಈಗ ರಾಜ್ಯದ ಜನತೆ ಕಾಮಪುರಾಣ ನೋಡಲಿ ಎಂದು ಸಿಡಿ ಬಿಡುಗಡೆ ಮಾಡಿದ್ದಾರಾ ? ಸೀಡಿ ಬಿಡುಗಡೆಗೂ ಮುನ್ನ ಸಚಿವರ ರಾಜೀನಾಮೆ ಪಡೆದಿದ್ದರೆ ಸ್ವಲ್ಪವಾದರೂ ರಾಜ್ಯ ಸರಕಾರದ ಮಾನ ಮರ್ಯಾದೆ ಉಳಿಯುತ್ತಿತ್ತು ಎಂದರು.

“ಮೇಟಿಯ ಕಾಮಪುರಾಣದ ವಿಡಿಯೋ ಸಿಡಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೋಡಿರಬಹುದು. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವರ ಕಾಮಪುರಾಣದ ಬಗ್ಗೆ ಮಾಹಿತಿ ಇತ್ತು. ಮಾಧ್ಯಮದಲ್ಲಿ ವಿಡಿಯೋ ಪ್ರಸಾರವಾದ ಮೇಲೆ ನೋಡೋಣ ಎಂದು ಸುಮ್ಮನಿದ್ದರು” ಎಂದು ಕುಮಾರಸ್ವಾಮಿ ಆರೋಪಿಸಿದರು.