ಸೊರಕೆ ಪುತ್ರಿ ವಿವಾಹದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂಪುಟದ ಕೆಲವು ಸದಸ್ಯರೊಂದಿಗೆ ಆಗಮಿಸಿ ಮಂಗಳವಾರ ರಾತ್ರಿ ನಡೆದ ಮಾಜಿ ಸಚಿವ, ಕಾಪು ಶಾಸಕ ವಿನಯಕುಮಾರ್ ಸೊರಕೆ ಅವರ ಪುತ್ರಿಯ ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಬೆಂಗಳೂರಿನಿಂದ ಮಂಗಳೂರು ವಿಮಾಣ ನಿಲ್ದಾಣಕ್ಕೆ ಆಗಮಿಸಿ ಅವರು ಬಳಿಕ ನೇರವಾಗಿ ನಗರದ ಟಿಎಂಎ ಪೈ ಇಂಟರ್‍ನ್ಯಾಷನಲ್ ಕನ್ವೆಷನ್ ಸೆಂಟರ್‍ಗೆ ಆಗಮಿಸಿದರು.

ಮುಖ್ಯಮಂತ್ರಿಗಳ ಜೊತೆಗೆ ಸಚಿವರಾದ ಎಚ್ ಕೆ ಪಾಟೀಲ್, ಬಿ ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಎಚ್ ಸಿ ಮಹದೇವಪ್ಪ, ಮಾಜಿ ಮಂತ್ರಿ ಮಲ್ಲಿಕಾರ್ಜುನಯ್ಯ ವಿ ಗುತ್ತೇದಾರ್ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಶೆಹನಾಯ್ ವಾದನ ನೀಡುತ್ತಿದ್ದ ಖ್ಯಾತ ಸಂಗೀತಕಾರರಾದ ಪಂಡಿತ್ ಬಲ್ಲೇಶ್ ಮತ್ತು ಅವರ ಪುತ್ರ ಕೃಷ್ಣ ಬಲ್ಲೇಶ್ ಅವರ ಬಳಿಗೆ ತೆರಳಿದ ಸಿಎಂ ಸ್ವಲ್ಪ ಹೊತ್ತು ಅವರ ಜೊತೆಗೆ ಸಂಭಾಷಣೆ ನಡೆಸಿದರು. ಅಲ್ಲದೆ ಅವರೊಂದಿಗೆ ಸೆಲ್ಫೀಗೂ ಪೋಸ್ ಕೊಟ್ಟು ಗಮನ ಸೆಳೆದರು.