ಮಹಿಳಾ ಅಧಿಕಾರಿ ನಿಂದಿಸಿದ ಎಂಎಲ್ಲೆ ಸೀಎಂ ಜತೆ ಚರ್ಚೆ

ಲಕ್ನೋ :  ಬಿಜೆಪಿ ಎಂಎಲ್ಲೆ ರಾಧಾಮೋಹನದಾಸ್ ಅಗ್ರವಾಲ್ ಮಹಿಳಾ ಐಪಿಎಸ್ ಅಧಿಕಾರಿ ಚಾರು ನಿಗಮ್ ಅವರನ್ನು ಸಾರ್ವಜನಿಕವಾಗಿ ನಿಂದಿಸಿರುವ ಘಟನೆ ಬಳಿಕ ಉಂಟಾಗಿರುವ ಪರಿಸ್ಥಿತಿ ಕುರಿತು ಸೀಎಂ ಯೋಗಿ ಆದಿತ್ಯನಾಥ್, ಅಗ್ರವಾಲರೊಂದಿಗೆ ನಿನ್ನೆ ಚರ್ಚಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ್ಷಕಿ ಚಾರು ನಿಗಮ್ ಅವರನ್ನು ನಿಂದಿಸಲಾದ ವೀಡಿಯೋ ವ್ಯಾಪಕವಾಗಿ ಹರಡಿದ್ದು, ಅಗ್ರವಾಲ್ ಜೊತೆ ಸೀಎಂ ತುರ್ತಾಗಿ ಮಾತುಕತೆ ನಡೆಸಿದ್ದಾರೆ.