ರಾಜ್ಯ ಹೈಕೋರ್ಟಿಗೆ ಜಡ್ಜುಗಳ ಶೀಘ್ರ ನೇಮಕ ಕೋರಿ ಪ್ರಧಾನಿಗೆ ಸೀಎಂ ಪತ್ರ

ಬೆಂಗಳೂರು : ಕರ್ನಾಟಕ ಹೈಕೋರ್ಟಿಗೆ ಜಡ್ಜುಗಳ ನಿಯುಕ್ತಿಗೊಳಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಸೀಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಜಡ್ಜುಗಳ ನೇಮಕಾತಿ ವಿಳಂಬ ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘಟನೆ(ಎಎಬಿ) ಪ್ರತಿಭಟನೆ ನಡೆಸಿದ್ದನ್ನು ಗಮನಿಸಿ ಸೀಎಂ ಈ ಕ್ರಮ ಕೈಗೊಂಡಿದ್ದಾರೆ. “ಹೈಕೋರ್ಟಿನಲ್ಲಿ ಜಡ್ಜುಗಳ ಬಲ ಶೇ 38 ಇದೆ. ಇಲ್ಲಿ ಮಂಜೂರಾದ 62 ಜಡ್ಜುಗಳಲ್ಲಿ ಕೇವಲ 47 ಮಂದಿ ಜಡ್ಜುಗಳು ಕರ್ತವ್ಯದಲ್ಲಿದ್ದಾರೆ. ಪ್ರಸಕ್ತ ಕರ್ನಾಟಕ ಹೈಕೋರ್ಟ್ ಹಾಗೂ ಧಾರವಾಡ ಮತ್ತು ಕಲಬುರ್ಗಿ ಹೈಕೋರ್ಟ್ ಪೀಠಗಳಲ್ಲಿ 2.5 ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿಯಾಗಿವೆ. ದಿನದಿಂದ ದಿನಕ್ಕೆ ಪ್ರಕರಣಗಳ ಲೋಡ್ ಹೆಚ್ಚುತ್ತಿದ್ದರೂ ಜಡ್ಜುಗಳ ಸಂಖ್ಯೆ ಕಡಿಮೆಯಾಗಿದೆ” ಎಂದು ಸೀಎಂ ತನ್ನ ಪತ್ರದಲ್ಲಿ ವಿವರಿಸಿದ್ದಾರೆ.

 

LEAVE A REPLY