`ಮುಖ್ಯಮಂತ್ರಿಗೆ ನನ್ನ ಅಗತ್ಯವಿಲ್ಲ’

ಬೆಂಗಳೂರು : ಸ್ನೇಹಿತರು ಮತ್ತು ಹಿತಚಿಂತಕರ ಜೊತೆಗೆ ಚರ್ಚೆ ನಡೆಸಿದ ಮೇಲೆ ತಮ್ಮ ರಾಜಕೀಯ ವೃತ್ತಿಜೀವನದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮಾಜಿ ಸಂಸದ ಮತ್ತು ಕಾಂಗ್ರೆಸ್ ನಾಯಕ ಎಎಚ್ ವಿಶ್ವನಾಥ್ ಹೇಳಿದ್ದಾರೆ.

“ಈಗ ನಾನು ಕಾಂಗ್ರೆಸ್‍ನಲ್ಲಿ ಇದ್ದೇನೆ. ಆದರೆ ಸಮಯವೇ ನನ್ನ ಭವಿಷ್ಯದ ಬಗ್ಗೆ ನಿರ್ಧರಿಸಲಿದೆ. ಕಾಂಗ್ರೆಸ್ ನಾಯಕರು ನನ್ನನ್ನು ಬದಿಗೆ ಸರಿಸಿದ್ದಾರೆ. ಆದರೆ ರಾಜ್ಯದ ಜನರ ಬೆಂಬಲ ನನಗಿದೆ” ಎಂದು ವಿಶ್ವನಾಥ್ ಹೇಳಿದ್ದಾರೆ.

“ಕಾಂಗ್ರೆಸ್ ಸರ್ಕಾರವು ಮೊದಲ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದೆ. ಆದರೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ರೀತಿಯಲ್ಲಿ ಕೆಲಸ ಮಾಡಲು ಆರಂಭಿಸಿ ಹಿರಿಯ ನಾಯಕರನ್ನು ನಿರ್ಲಕ್ಷಿಸಿದರು. ಕಾಂಗ್ರೆಸ್ಸಿಗೆ ಸೇರಲು ಸಿದ್ದರಾಮಯ್ಯರಿಗೆ ನನ್ನ ನೆರವು ಬೇಕಿತ್ತು. ಆದರೆ ಈಗ ಅವರಿಗೆ ನನ್ನ ಅಗತ್ಯವಿಲ್ಲ” ಎಂದು ವಿಶ್ವನಾಥ್ ಹೇಳಿದ್ದಾರೆ.

“ಸರ್ಕಾರದ ಸಾಧನೆಗಳನ್ನು ಪ್ರಕಟಿಸುವ ಬದಲಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ಅಧಿಕಾರಕ್ಕೆÀ ಬಂದ ಮೇಲೆ ಯಾವ ಬದಲಾವಣೆಗಳಾಗಿವೆ ಎಂದು ಜನರಲ್ಲಿ ಕೇಳಬೇಕು. ಸರ್ಕಾರ ತಂದಿರುವ