ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿ : ಸೀಎಂ

ನಮ್ಮ ಪ್ರತಿನಿಧಿ ವರದಿ

ಬಾರ್ಕೂರು (ಉಡುಪಿ) : ರಾಜ್ಯದ ಮೂರು ಕರಾವಳಿ ಜಿಲ್ಲೆಗಳಿಗೆ ಅನ್ವಯಿಸಿ ಪ್ರತ್ಯೇಕ ಮರಳು ನೀತಿ ರೂಪಿಸಲಾಗುವುದೆಂದು ಸೀಎಂ ಸಿದ್ದರಾಮಯ್ಯ ಇಲ್ಲಿ ತಿಳಿಸಿದರು.

ಸರ್ಕಾರ ಅಕ್ರಮ ಮರಳುಗಾರಿಕೆ ಸಹಿಸುವುದಿಲ್ಲ ಎಂದು ಸುದ್ದಿಗಾರರ ಜೊತೆ ಹೇಳಿದರು.

ಉಡುಪಿ ಡೀಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮತ್ತು ಅವರ ಬೆಂಗಾವಲಿಗರಿಗೆ ಎಪ್ರಿಲ್ 3ರಂದು ಹಲ್ಲೆ ನಡೆಸಲಾದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಜಿಲ್ಲಾ ಪೊಲೀಸರು ಹಲವರನ್ನು ಬಂಧಿಸಿದ್ದಾರೆ ಎಂದರು.

“ಯಾವುದೇ ಸಕ್ಕರೆ ಕಾರ್ಖಾನೆ ಲಾಭದಾಯಕವಾಗಬಹುದು. ಆದರೆ ಕಬ್ಬಿನಿಂದ ಉತ್ಪಾದಿಸುವ ಸಕ್ಕರೆ ಪ್ರಮಾಣ ಹೆಚ್ಚಾಗಬೇಕು” ಎಂದು ರೋಗಗ್ರಸ್ತ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರುಜ್ಜೀವಗೊಳ್ಳುವುದೇ ಎಂದು ಕೇಳಲಾದ ಪ್ರಶ್ನೆಗೆ ಸೀಎಂ ಮಾರ್ಮಿಕವಾಗಿ ಉತ್ತರಿಸಿದರು.

ಸೀಎಂ ಇತ್ತೀಚೆಗೆ ದೇವಸ್ಥಾನಗಳಿಗೆ ಹೆಚ್ಚೆಚ್ಚು ಭೇಟಿ ನೀಡುತ್ತಿದ್ದು, ಇದರ ಮರ್ಮವೇನೆಂದು ಕೇಳಿದಾಗ, “ನಾನು ನಾಸ್ತಿನಲ್ಲ. ಎಲ್ಲ ಕಡೆ ದೇವಸ್ಥಾನಗಳಿಗೆ ಹೋಗುವುದಿಲ್ಲ. ನಮ್ಮೂರಿನ ದೇವಸ್ಥಾನಗಳಿಗೆ ಹೋಗುತ್ತೇನೆ”  ಎಂದುತ್ತರಿಸಿದರು.

1 COMMENT

Comments are closed.