ಹತ್ತಿರವಾಗುತ್ತಿರುವ ಜಾನ್ವಿ-ಇಶಾನ್

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಹಾಗೂ ಶಾಹಿದ್ ಕಪೂರ್ ಸಹೋದರ ಇಶಾನ್ ಕಟ್ಟರ್ ಈಗ ಕರಣ್ ಜೋಹರ್ ನಿರ್ಮಿಸುತ್ತಿರುವ ಮರಾಠೀ ಚಿತ್ರ `ಸೈರಾಟ್’ ರಿಮೇಕ್ `ಧಡಕ್’ ಚಿತ್ರದ ಮೂಲಕ ಬಾಲಿವುಡ್ಡಿಗೆ ಎಂಟ್ರಿ ನೀಡಿದ್ದು ಗೊತ್ತೇ ಇದೆ. ಅವರೀಗ ಶೂಟಿಂಗಿನಲ್ಲಿ ಮಾತ್ರವಲ್ಲದೇ ಉಳಿದ ಬಿಡುವಿನ ಸಮಯದಲ್ಲಿ ಕೂಡಾ ಜೊತೆಯಲ್ಲಿಯೇ ಸಮಯ ಕಳೆಯುತ್ತಿದ್ದಾರೆ.

ಕಳೆದ ಒಂದು ವರ್ಷದಿಂದ ಡೇಟಿಂಗ್ ಮಾಡುತ್ತಿರುವ ಜಾನ್ವಿ ಹಾಗೂ ಇಶಾನ್ ಈಗ `ಧಡಕ್’ ಸಿನಿಮಾದ ಶೂಟಿಂಗ್ ಸಮಯದಲ್ಲಿ ಮತ್ತಷ್ಟು ಕ್ಲೋಸ್ ಆಗಿದ್ದಾರೆ ಎನ್ನಲಾಗಿದೆ. ಸದ್ಯ ರಾಜಸ್ತಾನದ ಉದಯಪುರದಲ್ಲಿ ಶೂಟಿಂಗ್ ನಡೆಯುತ್ತಿದ್ದು ಜಾನ್ವಿ-ಇಶಾನ್ ಮೊನ್ನೆ ಬಿಸಿಲಿನ ಝಳದಿಂದ ರಕ್ಷಣೆ ಪಡೆಯಲು ಒಂದೇ ಕೊಡೆ ಹಿಡಿದು ಒಬ್ಬರಿಗೊಬ್ಬರು ಆತು ಕುಳಿತಿದ್ದ ಸುಂದರ ಕ್ಷಣ ಈಗ ವೆಬ್ಬಿನಲ್ಲಿ ವೈರಲ್ ಆಗಿದೆ.

`ಧಡಕ್’ ಚಿತ್ರ ಶ್ರೀಮಂತ ಹುಡುಗಿ ಬಡ ಯುವಕನನ್ನು ಪ್ರೀತಿಸುವ ಕತೆಯಾಗಿದೆ. ಇದಲ್ಲದೇ `ಮರ್ಯಾದಾ ಹತ್ಯೆ’ಯ ಥೀಮ್ ಕೂಡಾ ಇರುವ ಈ ಸಿನಿಮಾವನ್ನು ಶಶಾಂಕ್ ಖೈತಾನ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ಜುಲೈನಲ್ಲಿ ತೆರೆಕಾಣಲಿದೆ.