ಬಾಗಿಲು ಮುಚ್ಚಿರುವ ಎಟಿಎಂಗಳು, 500 ರೂ ನೋಟು ಇನ್ನೂ ಅಲಭ್ಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರೂ.ಮುಖ ಬೆಲೆಯ ನೋಟುಗಳನ್ನು ದೇಶದಲ್ಲಿ ಅಮಾನ್ಯ ಮಾಡಿ ಬರೋಬ್ಬರಿ ಒಂದು ತಿಂಗಳು ಕಳೆದರೂ ಇನ್ನೂ ಪರಿಸ್ಥಿತಿ ಸುಧಾರಿಸಿದಂತೆ ಕಂಡುಬರುತ್ತಿಲ್ಲ. ನಗರದ ಬಹುತೇಕ ಎಟಿಎಂ ಕೇಂದ್ರಗಳ ಮುಂಭಾಗದಲ್ಲಿ ಇನ್ನೂ `ನೋ ಸರ್ವೀಸ್… ಸಾರಿ’ ಎನ್ನುವ ಬೋರ್ಡ್ ನೇತಾಡುತ್ತಿದೆ.

“ನೋಟು ಸಮಸ್ಯೆಯನ್ನು ಬಗೆಹರಿಸುವುದಕ್ಕೆ ನನಗೆ ಕನಿಷ್ಠ 50 ದಿನಗಳ ಕಾಲಾವಕಾಶ ಕೊಡಿ” ಎಂದು ಕೇಳಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಗಡು ಬಹುತೇಕ ಕೊನೆಗೊಳ್ಳುತ್ತಾ ಬಂದಿದೆ. ಆರ್ ಬಿ ಐ ಈಗಾಗಲೇ 500 ರೂ ನೋಟು ಬಿಡುಗಡೆ ಮಾಡಿದೆ ಎಂದು ಹೇಳುತ್ತಿದೆಯಾದರೂ ಇನ್ನೂ ಎಲ್ಲಿ ಕೂಡಾ 500 ರೂ ನೋಟು ಕಂಡು ಬರುತ್ತಿಲ್ಲ. ಈ ನೋಟು ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಚಲಾವಣೆಗೆ ಬಂದರೆ ಸಮಸ್ಯೆ ಬಹುತೇಕ ಕೊನೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

“ಕಪ್ಪು ಹಣ, ಭ್ರಷ್ಟಾಚಾರವನ್ನು ನಿಯಂತ್ರಿಸಲು ನಾನು ಈ ಕ್ರಮ ಕೈಗೊಂಡಿದ್ದೇನೆ” ಎಂದು ಪ್ರಧಾನಿ ಹೇಳಿದ ಮಾತು ನೋಟು ಅಮಾನ್ಯಗೊಂಡ ಬಳಿಕ ನಿಜ ದಂತೆ ಕೂಡಾ ಕಂಡುಬರುತ್ತಿಲ್ಲ. ಯಾಕೆಂದರೆ ಪ್ರತಿನಿತ್ಯ

ಭ್ರಷ್ಟಾಚಾರದಿಂದ ಮಾಡಿದ ಹಣ, ಹೊಚ್ಚ ಹೊಸ 2000 ರೂಪಯಿಗಳನ್ನು ಕೂಡಿಟ್ಟ ಕೋಟಿ ಕೋಟಿ ಹಣ ಅಧಿಕಾರಿಗಳ ಬಳಿ ಪತ್ತೆಯಾಗುತ್ತಲೇ ಇದೆ. ಮಂಗಳೂರಿನ ಬ್ಯಾಂಕ್ ಮುಂಭಾಗದಲ್ಲಿ ದುಡ್ಡಿಗಾಗಿ ಕ್ಯೂ ನಿಲ್ಲುವವರ ಸಂಖ್ಯೆ ಕಂಡುಬರುತ್ತಲೇ ಇದೆ..