ಹೆದ್ದಾರಿ ಹೊಂಡ ಮುಚ್ಚಿಸಿ ಪ್ರಾಣ ರಕ್ಷಿಸಿ

ರಾಷ್ಟ್ರೀಯ ಹೆದ್ದಾರಿ 66 ಬೈಕಂಪಾಡಿಯಿಂದ ಕೂಳೂರು ಸೇತುವೆತನಕದ ಹೆದ್ದಾರಿ ರಸ್ತೆ ಸಂಪೂರ್ಣ ಹೊಂಡಮಯವಾಗಿ ಮೃತ್ಯುಕೂಪವೆನಿಸಿದೆ ರಾತ್ರಿ ವೇಳೆ ಈ ಹೊಂಡಗಳನ್ನು ಗಮನಿಸಿದೇ ವಾಹನ ಚಲಾವಣೆ ಮಾಡಿದಲ್ಲಿ ನಿಯಂತ್ರಣ ಕಳೆದು ವಾಹನ ಪಲ್ಟಿಯಾಗುವ ಸಾಧ್ಯತೆ ಇದೆ ಬೈಕಂಪಾಡಿಯಿಂದ ಕೂಳೂರುತನಕ ಹೆದ್ದಾರಿ ಎರಡೂ ಬದಿಯ ನೀರು ಹೋಗುವ ಚರಂಡಿಯಲ್ಲಿ ಹೂಳು ತುಂಬಿ ಮಳೆ ನೀರು ರಸ್ತೆ ಬದಿಯೇ ಶೇಖರಣೆಗೊಂಡು ರಸ್ತೆಗಳು ಪೂರಾ ಹಾಳಾಗಿದೆ ಅದೇ ರೀತಿ ಹೊನ್ನಕಟ್ಟೆ ಸಿಗ್ನಲ್ ಇರುವ ಜಂಕ್ಷನ್ನಿನಲ್ಲಿಯೂ ಹೆದ್ದಾರಿ ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ ಬಿದ್ದು ಸಂಚಾರ ಅಸಾಧ್ಯವಾಗಿದೆ ಈಗ ಗುಂಡಿ ಮುಚ್ಚಲು ಕೆಂಪು ಕಲ್ಲನ್ನು ತಂದು ಹಾಕಿದ್ದಾರೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ಜಂಕ್ಷನ್ ಪರಿಸ್ಥಿತಿ ಹೇಳತೀರದು ಹೊಂಡ ತುಂಬಿಸಲು ಏನೇ ಸರ್ಕಸ್ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ ಅದೇ ರೀತಿ ಬೈಕಂಪಾಡಿ ಜೋಕಟ್ಟೆ ತಿರುಗುವಲ್ಲಿಯೂ ರಸ್ತೆ ಪೂರಾ ಕೆಟ್ಟು ಹೋಗಿದೆ ವರ್ಷದ ಹಿಂದೆ ಇದೇ ಪರಿಸ್ಥಿತಿ ಇರುವಾಗ ಈ ಹೊಂಡ ಬಿದ್ದ ಜಾಗಕ್ಕೆ ಡಾಮರೀಕರಣ ಮಾಡಿದ್ದರಿಂದ ಸ್ವಲ್ಪ ಸಮಯ ವಾಹನ ಓಡಾಟಕ್ಕೆ ಅನುಕೂಲವಾಗಿತ್ತು ಇದೀಗ ಕಳೆದ ಜೂನ್ ತಿಂಗಳಿನಿಂದ ಇಲ್ಲಿಯೂ ಮೊದಲಿನ ಸ್ಥಿತಿಗೆ ರಸ್ತೆ ಪರಿಸ್ಥಿತಿ ತಲುಪಿದ್ದು ಇದನ್ನು ರಾಷ್ಟ್ರೀಯ ಹೆದ್ದಾರಿಯೆನ್ನಬೇಕೋ ಹಳ್ಳಿಯರಲ್ಲಿರುವ ಸರ್ವೀಸ್ ರಸ್ತೆಯೆನ್ನಬೇಕೋ ತಿಳಿಯದು ಒಟ್ಟಿನಲ್ಲಿ ನಮ್ಮನ್ನು ಆಳುತ್ತಿರುವ ಜನಪ್ರತಿನಿಧಿಗಳು ಈ ಗುಂಡಿ ಬಿದ್ದ ರಸ್ತೆಯಲ್ಲಿಯೇ ಎದ್ದು ಬಿದ್ದು ಹೋಗುತ್ತಿರುತ್ತಾರೆಯೇ ವಿನಃ ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತರುತ್ತಿಲ್ಲ ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆಯು ವಾಹನಿಗರಿಗೆ ಮೃತ್ಯುಕೂಪವಾಗಿದ್ದು ಮಾತ್ರ ಸುಳ್ಳಲ್ಲ

  • ದಿನೇಶ್ ಅಮೀನ್  ತಣ್ಣೀರುಬಾವಿ