ಪುತ್ತೂರು ನಗರಸಭೆ ನರಕಸಭೆ

ಪುತ್ತೂರು ನಗರಸಭೆ ಆಗಿ  ನರಕಸಭೆ  ಯಾಕೆಂದ್ರೆ ನಗರಸಭೆಯ ಹತ್ತಿರವಿರುವ ಪಶು ವೈದ್ಯ ಆಸ್ಪತ್ರೆಯ ಬಳಿ ಇರುವ ತೋಡಿನಲ್ಲಿ ಕೊಳಚೆ ನೀರು ಹೋಗುತ್ತಿದ್ದರೂ ನೋಡುವವರು ಯಾರಿಲ್ಲ. ಜನರು ಈ ರೋಡಿನಲ್ಲಿ ಹೋಗುವಾಗ  ಮೂಗುಮುಚ್ಚಿ  ಹೋಗಬೇಕು. ಇದರ ಹತ್ರವೇ ರಿಕ್ಷಾ ಪಾರ್ಕಿಂಗ್ ಇದೆ. ಅವರು ಹೇಗೆ ನಿಲ್ಲಿಸುತ್ತಾರೋ ಅ ದೇವರೇ ಬಲ್ಲ.
ವ್ಯಾಪಾರಸ್ಥರನ್ನು ರಸ್ತೆ ಬದಿಯಿಂದ ಎಬ್ಬಿಸುವ ನಗರಸಭೆಗೆ ಇದ್ಯಾವುದೂ ಕಾಣುವುದಿಲ್ಲವೇ  ಹಾಗೂ ಮೀನಿನ ಮಾರ್ಕೆಟಿನ ಎದುರು ತೋಡು ಬಹಳ ಅಸಹ್ಯವೆನಿಸುತ್ತಿದೆ. ಇನ್ನಾದರೂ ನಗರಸಭೆ ಪುತ್ತೂರು ನಗರಸಭೆಯನ್ನು ನರಕಸಭೆ ಮಾಡದರಿಲಿ

  • ಎಸ್ ಎಮ್ ಪುತ್ತೂರು