ಸಾಂಕ್ರಾಮಿಕ ರೋಗ ತಡೆಗಟ್ಟಲು ಶುಚೀಕರಣ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಳೆಗಾಲದಲ್ಲಿ ಉದ್ಬವಿಸುತ್ತಿರುವ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಉದ್ದೇಶದಿಂದ ಆರೋಗ್ಯ ಇಲಾಖೆಯ ವತಿಯಿಂದ ಎಲ್ಲಾ ಗ್ರಾ ಪಂ.ಗಳಿಗೂ ಹಣ ಮಂಜೂರುಗೊಳಿಸಲಾಗಿದೆ. ಇದರಂತೆ ಮಂಜೇಶ್ವರ ಪಂ ವ್ಯಾಪ್ತಿಯ ಪ್ರತಿಯೊಂದು ವಾರ್ಡಿಗೂ ತಲಾ 10,000 ರೂ ಮಂಜೂರು ಗೊಳಿಸಲಾಗಿದೆ.

ಮಂಜೂರುಗೊಂಡ ಬಳಿಕ ತಡವಾಗಿಯಾದರೂ ಮಂಜೆಶ್ವರ ಪಂ ವ್ಯಾಪ್ತಿಯ 2ನೇ ವಾರ್ಡಿನಲ್ಲಿ ಕಾಮಗರಿಗೆ ಚಾಲನೆ ದೊರಕಿತು. ಸದಸ್ಯೆ ಮುಶ್ರತ್ ಜಹಾನ್ ಉಸ್ತುವಾರಿಯಲ್ಲಿ ಬುಲ್ಡೋಜರ್ ಉಪಯೋಗಿಸಿ ಅಲ್ಲಲ್ಲಿ ಶುಚೀಕರಣಗೊಳಿಸಲಾಯಿತು. ಇನ್ನೂ ಹಲವೆಡೆ ಶುಚೀಕರಣ ಬಾಕಿ ಇರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈ ಕಾಮಗಾರಿ ಮುಂದುವರಿಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ಗ್ರಾಮಸ್ಥರು.