ನೀರು ಬಳಕೆಯ ವಿಚಾರದಲ್ಲಿ ಇಬ್ಬರ ನಡುವೆ ಹೊಡೆದಾಟ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಟ್ಯಾಂಕ್ ನೀರು ಬಳಕೆ ಮಾಡುವ ವಿಚಾರದಲ್ಲಿ ಮನೆ ಮಾಲಿಕ ಮತ್ತು ಬಾಡಿಗೆ ಮನೆಯವರೊಳಗೆ ತಕರಾರು ನಡೆದು ಹೊಡೆದಾಟವಾದ ಘಟನೆ ಪಡ್ನೂರಿನಲ್ಲಿ ನಡೆದಿದೆ.

ಪಡ್ನೂರು ಶಾಂತಿನಗರ ನಿವಾಸಿ ಅಬ್ದುಲ್ ಸಲೀಂ ಮತ್ತು ಗಾರೆಕೆಲಸದ ಕಾರ್ಮಿಕ ಮೆಹಬುಬ್ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಇನ್ನೊಂದು ತಂಡ ಅಮ್ಮೂನ್ ಎಂಬವರ ಪತ್ನಿ ಆಯಿಷಾ, ಪುತ್ರರಾದ ಫಾರೂಕ್ ಮತ್ತು ರಶೀದ್ ಎಂಬವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಅಬ್ದುಲ್ ಸಲೀಂ ಮನೆಯಲ್ಲಿ ಲೀಸಿಗೆ ವಾಸವಾಗಿರುವ ಅಮ್ಮೂನ್ ಮನೆಯವರು ಟ್ಯಾಂಕ್ ನೀರನ್ನು ಪೋಲು ಮಾಡುತ್ತಿದ್ದರು. ಸಲೀಂ ಮತ್ತು ಅಮ್ಮೂನ್ ಕುಟುಂಬಕ್ಕೆ ಒಂದೇ ಟ್ಯಾಂಕ್ ಇದ್ದು ನೀರು ಪೋಲು ಮಾಡದಂತೆ ಮತ್ತು ಕಡಿಮೆ ನೀರು ಬಳಸುವಂತೆ ಸಲೀಂ ಹೇಳಿದ್ದರು. ಈ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿತ್ತು. ಸಂಜೆ ವೇಳೆ ಮತ್ತೆ ಇದೇ ವಿಚಾರದಲ್ಲಿ ಜಗಳ ಉಂಟಾಗಿದ್ದು ಪರಸ್ಪರ ಹೊಡೆದಾಟ ನಡೆಸಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.