ಬೋರ್ವೆಲ್ ವಿಚಾರದಲ್ಲಿ ಸಹೋದರರ ಮಧ್ಯೆ ಘರ್ಷಣೆ ಕೊಲೆಯಲ್ಲಿ ಅಂತ್ಯ

ಮೂವರು ಆಸ್ಪತ್ರೆಗೆ

ನಮ ಪ್ರತಿನಿಧಿ ವರದಿ
ಕಾಸರಗೋಡು : ಕೊಳವೆ ಬಾವಿ ನಿರ್ಮಿಸುವಲ್ಲಿ ಸಹೋದರರ ಮಧ್ಯೆ ಉಂಟಾದ ಘರ್ಷಣೆಯಲ್ಲಿ ಒಬ್ಬ ಕೊಲೆಗೈಯ್ಯಲ್ಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಹೊಸದುರ್ಗ ಬಳಿ ಶನಿವಾರ ರಾತ್ರಿ ನಡೆದಿದೆ
ಹೊಸದುರ್ಗ ಪೆÇಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ರಾವಣೀಶ್ವರ ಪಾಡಿಕಾನಂ ನಿವಾಸಿ ಕುಮಾರನ್ (50) ಎಂಬವರು ಕೊಲೆಗೈಯ್ಯಲ್ಪಟ್ಟ ವ್ಯಕ್ತಿಯಾಗಿದ್ದಾರೆ. ಅವರ ಪತ್ನಿ ವತ್ಸಲ (40), ಪುತ್ರ ಪ್ರಸಾದ್ (24) ಮತ್ತು ಸಹೋದರ ಪದ್ಮನಾಭನ್ (54) ಎಂಬವರು ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ  ಈ ಪೈಕಿ ಗಂಭೀರ ಗಾಯಗೊಂಡ ವತ್ಸಲ ಮತ್ತು ಪ್ರಸಾದರನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ  ಪದ್ಮನಾಭನರನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ
ಕೊಲೆಗೈಯ್ಯಲ್ಪಟ್ಟ ಕುಮಾರನ್ ಹಿತ್ತಿಲಲ್ಲಿ ಕೊಳವೆ ಬಾವಿ ನಿರ್ಮಿಸಲು ಅವರು ತೀರ್ಮಾನಿಸಿದ್ದರು  ಅವರು ಶನಿವಾರ ಬೆಳಿಗ್ಗೆ ಅದಕ್ಕೆ ಅಗತ್ಯದ ಸಿದ್ಧತೆಯಲ್ಲಿ ತೊಡಗಿದಾಗ ಪಕ್ಕದಲ್ಲೇ ವಾಸಿಸುತ್ತಿರುವ ಅವರ ಸಹೋದರರಾದ ಪದ್ಮನಾಭನ್  ಶ್ರೀಧರನ್ ಮತ್ತು ನಾರಾಯಣನ್ ವಿರೋಧ ವ್ಯಕ್ತಪಡಿಸಿದರು. ಈ ವಿಷಯದಲ್ಲಿ ಅವರೊಳಗೆ ತೀವ್ರ ವಾಗ್ವಾದ ನಡೆದಿತ್ತು  ಜೊತೆಗೆ  ಕೊಳವೆ ಬಾವಿ ನಿರ್ಮಾಣವನ್ನು ವಿರೋಧಿಸಿದ ಸಹೋದರರು ಆ ಬಗ್ಗೆ ಹೊಸದುರ್ಗ ಪೆÇಲೀಸರಿಗೂ ದೂರು ನೀಡಿದ್ದರು  ಅದರಂತೆ ಪೆÇಲೀಸರು ಎರಡು ಕಡೆಯವರನ್ನು ಠಾಣೆಗೆ ಕರೆಸಿ ವಿವಾದ ಮುಗಿಯುವ ತನಕ ಕೊಳವೆ ಬಾವಿ ನಿರ್ಮಾಣದಲ್ಲಿ ತೊಡಗದಂತೆ ಕುಮಾರನರಿಗೆ ಹೇಳಿದ್ದರು
ಶನಿವಾರ ರಾತ್ರಿ 11.30ಕ್ಕೆ ಕುಮಾರನ್ ಹಿತ್ತಿಲಿಗೆ ಕೊಳವೆ ಬಾವಿ ತೋಡುವ ವಾಹನ ಬಂದು ಕೆಲಸದಲ್ಲಿ ತೊಡಗಿದಾಗ ಕುಮಾರನ್ ಸಹೋದರರು ತಕ್ಷಣ ಅಲ್ಲಿಗೆ ಬಂದು ಅದನ್ನು ತಡೆದರು  ಆಗ ಪರಸ್ಪರ ವಾಗ್ವಾದ ಉಂಟಾಗಿ ಅದು ಘರ್ಷಣೆಯತ್ತ ತಿರುಗಿ ಕುಮಾರನ್ ಗಂಭೀರ ಇರಿತಕ್ಕೊಳಗಾದರು. ಅದನ್ನು ತಡೆಯಲು ಬಂದ ಅವರ ಪತ್ನಿ ವತ್ಸಲ ಮತ್ತು ಪುತ್ರ ಪ್ರಸಾದ್ ಕೂಡಾ ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡರು. ಘರ್ಷಣೆಯಲ್ಲಿ ಕುಮಾರನ್ ಸಹೋದರ ಪದ್ಮನಾಭನ್ ಕೂಡಾ ಗಾಯಗೊಂಡಿದ್ದಾರೆ  ಗಾಯಾಳುಗಳನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಕುಮಾರನ್ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ  ಗಂಭೀರ ಗಾಯಗೊಂಡ ಅವರ ಪತ್ನಿ ಮತ್ತು ಪುತ್ರನನ್ನು ಬಳಿಕ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಯಿತು
ಹೊಸದುರ್ಗ ಪೆÇಲೀಸರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ  ಕೊಲೆಯಾದ ಕುಮಾರನ್ ಸಹೋದರರಾದ ಶ್ರೀಧರನ್ ಮತ್ತು ನಾರಾಯಣನರನ್ನು ಪೆÇಲೀಸರು ವಶಕ್ಕೆ ಪಡೆದು ಪ್ರಶ್ನಿಸುತ್ತಿದ್ದಾರೆ