ಕ್ಲಬ್ ಕಾರ್ಯಕರ್ತರ ಮಧ್ಯೆ ಹೊಡೆದಾಟ

ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳುಗಳು

6 ಮಂದಿ ಆಸ್ಪತ್ರೆಗೆ, ವಾಹನಗಳಿಗೆ ಹಾನಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕ್ಷುಲ್ಲಕ ಕಾರಣದಿಂದ ಎರಡು ಕ್ಲಬ್ ಸದಸ್ಯರೊಳಗೆ ನಡೆದ ಮಾತಿನ ಚಕಮಕಿ ಬಳಿಕ ಹೊಡೆದಾಟದಲ್ಲಿ ಪರ್ಯಾವಸಾನಗೊಂಡ ಘಟನೆ ಬಂದ್ಯೋಡ್ ಅಡ್ಕದಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೆÇಲೀಸರು 25 ಮಂದಿ ವಿರುದ್ದ ಕೇಸು ದಾಖಲಿಸಿದ್ದಾರೆ.

ವೀರನಗರ ಶೂಟರ್ಸ್ ಕ್ಲಬ್ ಹಾಗೂ ಜನನಿ ಕ್ಲಬ್ ಕಾರ್ಯಕರ್ತರ ಮಧ್ಯೆ ಹೊಡೆದಾಟ ನಡೆದಿದೆ. ಹೊಡೆದಾಟದಲ್ಲಿ ಅಲ್ತಾಫ್ (18), ಪ್ರಶಾಂತ್ (17), ಆಹ್ಮದ್ ಬಾತಿಷಾ (19), ಅಜಯ್ (19), ಪ್ರದೀಪ್ (23) ಹಾಗೂ ಹರ್ಷಿತ್ (18) ಎಂಬಿವರು ಗಾಯಗೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೇರಂ ಆಟಕ್ಕೆ ಸಂಬಂಧಿಸಿ ಉಂಟಾದ ತರ್ಕವೇ ಹೊಡೆದಾಟಕ್ಕೆ ಕಾರಣವೆನ್ನಲಾಗಿದೆ.

ಘಟನೆಗೆ ಸಂಬಂಧಿಸಿ ಪ್ರಶಾಂತ್, ಅಜಯ್, ಹರ್ಷಿತ್, ಅಲ್ತಾಫ್, ಆಹ್ಮದ್ ಬಾತಿಷಾ ಸೇರಿದಂತೆ 25 ಮಂದಿ ವಿರುದ್ದ ಮಂಜೇಶ್ವರ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಆರು ಮಂದಿಯನ್ನು ಪೆÇಲೀಸರು ವಶಕ್ಕೆ ತೆಗೆದಿದ್ದಾರೆ.