ವಸಂತ್ ಬೆರ್ನಾಡರಿಗೆ ನಾಗರಿಕ ಸಮ್ಮಾನ

ಮುಲ್ಕಿ : ಸಾರ್ವಜನಿಕ ಅಭಿನಂದನಾ ಸಮಿತಿ ಹಳೆಯಂಗಡಿ ಇದರ ವತಿಯಿಂದ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾಗಿ ಆಯ್ಕೆಯಾಗಿರುವ  ವಸಂತ್ ಬೆರ್ನಾಡ್ ಹಾಗೂ ಜಿ ಪಂ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಸ್ತೂರಿ ಪಂಜರನ್ನು ಸಾರ್ವಜನಿಕ ಆಭಿನಂದನಾ ಸಮಾರಂಭ ಹಳೆಯಂಗಡಿಯ ರಾಮಾನುಗ್ರಹದಲ್ಲಿ ನಡೆಯಿತು.ಈ ಸಂದರ್ಭ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಮಾಜೀ ಸಚಿವ, ಶಾಸಕ ಅಭಯಚಂದ್ರ ಜೈನ್, ವಿದ್ವಾನ್ ಪಂಜ ಭಾಸ್ಕರ ಭಟ್, ಹಳೆಯಂಗಡಿ ಗ್ರಾಮಪಂಚಾಯತಿ ಅಧ್ಯಕ್ಷೆ ಜಲಜಾ, ರೆ ಸಭಾಸ್ಟಿಯನ್ ಜತ್ತನ್ನ, ಅಬ್ದುಲ್ಲ ಮದನಿ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಧನಂಜಯ ಮಟ್ಟು, ಸಾಹುಲ್ ಹಮೀದ್, ಯಶೋಧರ ಹಳೆಯಂಗಡಿ, ಧರ್ಮಾನಂದ ಕುಂದರ್, ಉದಯ ಬೆರ್ನಾಡ್ ಮತ್ತಿತರರು ಇದ್ದರು.