ಭ್ರಷ್ಟ ಅಧಿಕಾರಿಗಳ ಯಡವಟ್ಟಿನಿಂದ ಮೂಲಗುಂಪಾದ ನಗರದ ಸ್ಮಾರಕ

ಟಾಗೋರ್ ಪಾರ್ಕಿಗೆ ಮನಪಾ ಶೃಂಗಾರ !

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಜಿಲ್ಲೆಯ ಭ್ರಷ್ಟ ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳಿಂದಾಗಿ ಮೂಲೆಗುಂಪಾದ ಐತಿಹಾಸಿಕ ಸ್ಮಾರಕ ನಗರದ ಬಾವುಟಗುಡ್ಡೆಯಲ್ಲಿರುವ ಟಾಗೋರ್ ಪಾರ್ಕಿಗೆ ತೆರಿಗೆದಾರರ ಹಣದಿಂದಲೇ ಶೃಂಗಾರ ಮಾಡಲು ಮಂಗಳೂರು ಮಹಾನಗಪಾಲಿಕೆ ಮುಂದಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ನೆನಪಿಗಾಗಿ ಸ್ಥಾಪಿಸಲಾದ ಪಾರ್ಕ್ ಹಲವು ಕಾರಣಗಳಿಗಾಗಿ ಐತಿಹಾಸಿಕ ಸ್ಥಳವಾಗಿದೆ. ಅಂದಿನ ಮೈಸೂರು ರಾಜ ಹೈದರಾಲಿ ಸ್ಥಾಪಿಸಿದ ಲೈಟ್ ಹೌಸ್ ಟವರ್ ಮತ್ತು ವಾಟ್ ಟವರು ಕೂಡ ಇಲ್ಲಿದೆ. ಮಾತ್ರವಲ್ಲದೆ, ಕಾರ್ನಾಡ್ ಸದಾಶಿವ ರಾವ್ ಹೆಸರಿನ ಗ್ರಂಥಾಲಯ ಇಲ್ಲಿದೆ. ಟ್ಯಾಗೋರ್ ಪಾರ್ಕ್ ಸುತ್ತಮುತ್ತ ಎರಡು ವಿದ್ಯಾಸಂಸ್ಥೆಗಳಲ್ಲದೆ, ಸಂತ ಅಲೋಶಿಯಸ್ ಕ್ಯಾಥಢ್ರಲ್, ಸಾರ್ವಜನಿಕ ಗ್ರಂಥಾಲಯ, ಬಸ್ ನಿಲ್ದಾಣ, ಮಾಲ್ ಇತ್ಯಾದಿ ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಓಡಾಡುವ ಪ್ರದೇಶ ಈಗ ಕಮರ್ಷಿಯಲ್ ಕೊಂಪೆಯಾಗಿದೆ.

ಹಲವು ನಿಯಮಗಳನ್ನು ಉಲ್ಲಂಘಿಸಿ ತಲೆ ಎತ್ತಿರುವ ಬೃಹತ್ ವಸತಿ ಸಂಕೀರ್ಣ ಐತಿಹಾಸಿಕ ಟ್ಯಾಗೋರ್ ಪಾರ್ಕನ್ನು ಸಂಪೂರ್ಣ ಮುಚ್ಚಿ ಹಾಕಿದೆ. ಸಾರ್ವಜನಿಕರು ಈ ಟ್ಯಾಗೋರ್ ಪಾರ್ಕಿನಿಂದ ಸೂರ್ಯಾಸ್ತಮಾನ ವೀಕ್ಷಿಸುತ್ತಿದ್ದರು. ಈಗ ಅಂತಹ ಅವಕಾಶವೇ ಇಲ್ಲ. ಇದಕ್ಕೆ ಕಾರಣ, ಮಹಾನಗರಪಾಲಿಕೆ ಮತ್ತು ಜಿಲ್ಲಾಡಳಿತ ಹಾಗೂ ಇತಿಹಾಸದ ಬಗ್ಗೆ ಕೊಂಚವೂ ಗೌರವ ಇಲ್ಲದ ನಿರ್ಲಜ್ಜ, ಭ್ರಷ್ಟ ಅಧಿಕಾರಿಗಳು.

ಮಂಗಳೂರು ನಗರದ ಲ್ಯಾಂಡ್ ಮಾರ್ಕ್ ಐತಿಹಾಸಿಕ ಸ್ಮಾರಕವೊಂದನ್ನು ತಿಂದು ಹಾಕುವಂತೆ ಬೃಹತ್ ಬಹುಮಹಡಿ ನಿರ್ಮಿಸಲು ಅನುಮತಿ ನೀಡಿರುವ ಮಹಾನಗರಪಾಲಿಕೆಯ ಅಧಿಕಾರಿಗಳು ಇಂದು ಅದೇ ಮಹಾನಗರಪಾಲಿಕೆಯ ಆಡಳಿತ ಪಕ್ಷ ಸದಸ್ಯ ಕೋರ್ಟ್ ಕಾಪೆರ್Çರೇಟರ್ ವಿನಯರಾಜ್ ಈ ಪಾರ್ಕ್ ಸುಂದರಗೊಳಿಸಲು ಮುಂದಾಗಿದ್ದಾರೆ.

ಬಾವುಟ ಗುಡ್ಡೆಯ ಈ ಪಾರ್ಕ್ ಹತ್ತು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳ್ಳಗಾಗಿತ್ತು. ಹೊಸ ಕಟ್ಟಡ ತಲೆ ಎತ್ತುವಾಗ ಸಾರ್ವಜನಿಕರಿಂದ ವಿರೋಧ ಬರಬಾರದೆಂದೇ ಪಾರ್ಕ್ ಉಪಯೋಗವನ್ನು ನಿರ್ಬಂಧಿಸಲಾಗಿತ್ತು. ಈಗ ಖಾಸಗಿಯವರ ಬಹುಮಹಡಿ ಕಟ್ಟಡ ಬಹುತೇಕ ಸಿದ್ಧವಾಗಿದ್ದು, ಮನೆಗಳನ್ನು ಮಾರಾಟ ಮಾಡುವ ವೇಳೆ ಸನಿಹದ ಪಾರ್ಕ್ ಒಂದಷ್ಟು ಹಸಿರಿನಿಂದ ಕಂಗೊಳಿಸಿದರೆ ಫ್ಲಾಟುಗಳ ಮಾರಾಟ ಸುಲಭ ಆಗಲಿದೆ.

ಮಾತ್ರವಲ್ಲದೆ, ಅಪಾರ್ಟಮೆಂಟಿನಲ್ಲಿ ಕ್ಲಬ್ ಹೌಸ್, ಲೈಬ್ರೈರಿ, ವಾಕರ್ಸ್ ಪಾಥ್ ಇಲ್ಲದಿದ್ದರೂ ತೊಂದರೆ ಇಲ್ಲ ಫ್ಲಾಟು ನಿವಾಸಿಗಳು ಇದೇ ಪಾರ್ಕನ್ನು ಧಾರಾಳವಾಗಿ ಉಪಯೋಗಿಸಬಹುದು. ಇದಕ್ಕಾಗಿ ಈಗ ತುರ್ತಾಗಿ ಪಾರ್ಕ್ ದುರಸ್ಥಿ ಮಾಡಲು ಮಹಾನಗರಪಾಲಿಕೆ ಮುಂದಾಗಿದೆ. ಅದಕ್ಕಾರಿ ಹಣಕಾಸು ಆಯೋಗದ ಅನುದಾನದಿಂದ ಹದಿನೈದು ಲಕ್ಷ ರೂ ಮಂಜೂರು ಮಾಡಲಿದೆ.

ಮಂಗಳೂರು ಮಹಾನಗರದಲ್ಲಿ ಕೆಲವು ಚಿಕ್ಕ ಪುಟ್ಟ ಪಾರ್ಕುಗಳು ಹಲವಾರು ವರ್ಷಗಳಿಂದ ಯಾವುದೇ ದುರಸ್ಥಿ ಕಾಣದೆ ಬಾಡುತ್ತಿರಬೇಕಾದರೆ ಈ ಪಾರ್ಕಿಗೆ ಮಾತ್ರ ಅಭಿವೃದ್ಧಿ ಭಾಗ್ಯ ಬಂದಿದೆ.

ಸ್ಥಳೀಯ ಕಾಪೆರ್Çರೇಟರ್ ವಿನಯರಾಜ್ ಮಾತ್ರ ಪಾರ್ಕ್ ಅಭಿವೃದ್ಧಿಗೆ ಈಗ ಅತ್ಯುತ್ಸಾಹ ತೋರಿದ್ದು, ಸುಮಾರು ಒಂದು ಕೋಟಿ ರೂಪಾಯಿ ವೆಚ್ಚ ಮಾಡಿ ಪಾರ್ಕ್ ಅಭಿವೃದ್ಧಿ ಮಾಡಲು ಸಿದ್ಧರಾಗಿದ್ದಾರೆ.