ಸಿಐಟಿಯು ಪ್ರತಿಭಟನೆ

ಸಿಐಟಿಯು ನಿಂದ ನಡೆದ ಪ್ರತಿಭಟನೆ

 ನಮ್ಮ ಪ್ರತಿನಿಧಿ ವರದಿ

ಕಾಸರಗೋಡು :  ಕೆಲಸಕ್ಕಣುಗುಣವಾದ ವೇತನ ನೀಡಬೇಕೆಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪು ಎಲ್ಲಾ ಕ್ಷೇತ್ರದ ಕಾರ್ಮಿಕರಿಗೂ ಅನ್ವಯವಾಗಬೇಕೆಂದು ಒತ್ತಾಯಿಸಿ ಸಿಐಟಿಯು ವತಿಯಿಂದ ದೇಶದಾಧ್ಯಂತ ಹೋರಾಟಗಳು ನಡೆಯುತ್ತಿವೆ. ಇದರ ಭಾಗವಾಗಿ ಕಾಸರಗೋಡು ನಗರ ಸಮಿತಿ ವತಿಯಿಂದ ಕಾಸರಗೋಡು ಹೊಸ ಬಸ್ಸು ನಿಲ್ದಾಣ ಬಳಿ ನಡೆದ ಪ್ರತಿಭಟನಾ ಧರಣಿಯನ್ನು ಸಿ ಐಟಿ ಯು ರಾಜ್ಯ ಕಾರ್ಯದರ್ಶಿ ಟಿ ಕೆ ರಾಜನ್ ಉದ್ಘಾಟಿಸಿದರು. ನೇತಾರರ ಸಹಿತ ಹಲವಾರು ಮಂದಿ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.