ಶಾಲೆ ಬದಲು ಐಷಾರಾಮಿ ಹೋಟೆಲಿಗೆ ಪರವಾನಗಿ ನೀಡಿದ ಪಾಲಿಕೆ ವಿರುದ್ಧ ನಾಗರಿಕರ ಪ್ರತಿಭಟನೆ

ಪಾಲಿಕೆ ವಿರುದ್ಧ ಪ್ರತಿಭಟಿಸಿದ ಸಾರ್ವಜನಿಕರು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಬಾಸೆಲ್ ಮಿಷನ್ ಆಡಳಿತಕ್ಕೊಳಪಟ್ಟ ಶಾಲಾ ಜಾಗದಲ್ಲಿ ಇದೀಗ ಶಾಲಾ ಆರ್ ಟಿ ಸಿ.ಯನ್ನು ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ಐಷಾರಾಮಿ ಹೋಟೆಲು ತಲೆ ಎತ್ತಲು ಸಜ್ಜಾಗಿದ್ದು, ಪರವಾನಗಿ ನೀಡಿದ ಪಾಲಿಕೆ ವಿರುದ್ಧ ಗುರುವಾರ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಇಲ್ಲಿನ ಸ್ಥಳೀಯ ಆಡಳಿತ ಇಲ್ಲಿ ಈ ಹಿಂದೆ ಗೋದಾಮು ಇತ್ತು ಎಂದು ಷರಾ ಬರೆದು ಒಪ್ಪಿಗೆಯನ್ನೂ ಕಾನೂನುಬಾಹಿರವಾಗಿ ನೀಡಿದೆ ಎಂದು ತಿಳಿದುಬಂದಿದೆ. ಇದರ ಹಿಂದೆ ಕಾಣದ ಶಕ್ತಿಗಳ ಕೈವಾಡವಿದ್ದು, ಈ ಹಿಂದೆ ಟ್ರೇಡ್ ಲೈಸನ್ಸ್ ನೀಡಲು ಒಪ್ಪಿಗೆ ನೀಡಲು ನಿರಾಕರಿಸಿದ ಪಾಲಿಕೆ ಆಡಳಿತ ಇದೀಗ ನೀಡಿದೆ ಎನ್ನಲಾಗಿದೆ.

ದಾನಿಯೊಬ್ಬರು ಬಡ ಮಕ್ಕಳ ಶಿಕ್ಷಣಕ್ಕೆ ನೀಡಿದ ಜಾಗವನ್ನು ಇದೀಗ ವ್ಯಾಪಾರಕ್ಕಾಗಿ ಬಳಸಲಾಗುತ್ತಿರುವುದು ವಿಪರ್ಯಾಸವಾಗಿದೆ ಎಂದು ಮಾನವ ಹಕ್ಕು ಹೋರಾಟಗಾರ, ಆರ್ ಟಿ ಐ ಕಾರ್ಯಕರ್ತ ಹನೀಫ್ ಸಾಹೇಬ್ ಪಾಜಪಳ್ಳ ದೂರಿದ್ದಾರೆ.

ಸ ಒಕೆ