ನಾರಾಯಣಮಂಗಲದಲ್ಲಿ ಮದ್ಯದಂಗಡಿ ವಿರುದ್ದ ನಾಗರಿಕರ ಪ್ರತಿಭಟನೆಗೆ ಚಾಲನೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕುಂಬಳೆಯಲ್ಲಿ ಕಾರ್ಯಾಚರಿಸುತ್ತಿರುವ ಬಿವರೇಜ್ ಕಾಪೊರೇಶನ್ನಿನ ಮದ್ಯದಂಗಡಿಯನ್ನು ರಾಜ್ಯ ಉಚ್ಚನ್ಯಾಯಾಲಯದ ಆದೇಶದನ್ವಯ ಮುಚ್ಚುವ ಹಿನ್ನೆಲೆಯಲ್ಲಿ ಮದ್ಯದಂಗಡಿಯ ಸಂಬಂಧಪಟ್ಟ ಗುತ್ತಿಗೆದಾರರು ಕುಂಬಳೆ ಪೇಟೆಯಿಂದ ಅನತಿ ದೂರದ ನಾರಾಯಣಮಂಗಲದ ಖಾಸಗೀ ವ್ಯಕ್ತಿಯೊಬ್ಬರ ಜನವಾಸವಿಲ್ಲದ ಕುಸಿಯುವ ಹಂತದ ಮನೆಯೊಂದಕ್ಕೆ ತೆರೆಮರೆಯಲ್ಲಿ ಸ್ಥಳಾಂತರಿಸಲು ಯತ್ನಿಸಿರುವುದನ್ನು ಖಂಡಿಸಿ ಮದ್ಯದಂಗಡಿ ವಿರೋಧಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಆ ಮನೆಯ ಮುಂದೆ ಅನಿsರ್ಧಿಷ್ಟಾವಧಿ ಪ್ರತಿಭಟನಾ ಮುಷ್ಕರಕ್ಕೆ ಚಾಲನೆ ನೀಡಲಾಯಿತು.
ಹಿರಿಯ ನಿವೃತ್ತ ಸೈನಿಕ ಶಿವರಾಮ ಭಟ್ ನೇತೃತ್ವದ ಕ್ರಿಯಾ ಸಮಿತಿ ನಾರಾಯಣಮಂಗಲದಲ್ಲಿ ಮದ್ಯದಂಗಡಿ ತೆರೆಯದಂತೆ ವಿರೋಧ ವ್ಯಕ್ತಪಡಿಸಿದ್ದು, ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದೆಂದು ತಿಳಿಸಲಾಗಿದೆ.
ಸ್ಥಳಾಂತರಗೊಳಿಸಿ ಮಾರಾಟ ಕೇಂದ್ರ ಆರಂಭಿಸಲು ಉದ್ದೇಶಿತ ಮನೆಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಹಲವಾರು ಮುಖಂಡರು ಪಾಲ್ಗೊಂಡರು.