ತಾಜಮಹಲ್ ವಸ್ತು ಸಂಗ್ರಹಾಲಯವೇ ಅಥವಾ ಮಂದಿರವೇ : ಕೇಂದ್ರಕ್ಕೆ ಮಾಹಿತಿ ಆಯೋಗ ಪ್ರಶ್ನೆ

ನವದೆಹಲಿ : ಆರ್ ಟಿ ಐ ಅರ್ಜಿಯೊಂದಕ್ಕೆ ಸಂಬಂಧಿಸಿ ಶಹಜಾನನಿಂದ ನಿರ್ಮಿಸಲಾಗಿದೆ ಎನ್ನಲಾಗಿರುವ ತಾಜಮಹಲ್ ವಸ್ತು ಸಂಗ್ರಹಾಲಯವೇ ಅಥವಾ ರಾಜಪೂತ ದೊರೆಯೊಬ್ಬ ಮೊಗಲ್ ಚಕ್ರಮರ್ತಿಗೆ ಉಡುಗೊರೆಯಾಗಿ ನೀಡಿದ ದೇವಸ್ಥಾನವೇ ಎಂದು ಕೇಂದ್ರೀಯ ಮಾಹಿತಿ ಆಯೋಗವು ಕೇಂದ್ರ ಸಂಸ್ಕøತಿ ಸಚಿವಾಲಯವನ್ನು ಕೇಳಿಕೊಂಡಿದೆ. ತಾಜಮಹಲ್ ವಿಷಯದಲ್ಲಿ ಇತಿಹಾಸ ವಿಭಿನ್ನ ನಿರೂಪಣೆ ಮತ್ತು ವಿವಿಧ ಕೋರ್ಟುಗಳಲ್ಲಿರುವ ವಿಷಯಕ್ಕೆ ಸಂಬಂಧಿಸಿ ಸಿಐಸಿಗೆ ಬಂದಿರುವ ತೀರಾ ಸಂದಿಗ್ಧವಾದ ಆರ್‍ಟಿಐ ಪ್ರಶ್ನೆಯೊಂದು ತಲುಪಿರುವ ಈಗ ಸಂಸ್ಕøತಿ ಸಚಿವಾಲಯದ ಕದ ತಟ್ಟಿದೆ