ಸ್ಮ್ರಿತಿ ಶೈಕ್ಷಣಿಕ ದಾಖಲೆ ಪರಿಶೀಲಿಸಲು ಅನುಮತಿ ಕೊಡುವಂತೆ ಸಿಐಸಿ ಆಜ್ಞೆ

ಇರಾನಿ

 ನವದೆಹಲಿ : ಕೇಂದ್ರ ಜವುಳಿ ಸಚಿವೆ ಸ್ಮøತಿ ಇರಾನಿಯ 10ನೇ ಹಾಗೂ 12ನೇ ಬೋರ್ಡ್ ಪರೀಕ್ಷೆಗಳ ದಾಖಲೆಗಳನ್ನು ಪರಿಶೀಲಿಸಲು ಅನುಮತಿಸುವಂತೆ  ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ನಿಗೆ ಕೇಂದ್ರ ಮಾಹಿತಿ ಆಯೋಗ ಮಂಗಳವಾರ ಆದೇಶಿಸಿದೆಯಲ್ಲದೆ `ಖಾಸಗಿ ಮಾಹಿತಿ’ಯನ್ನು ಬಹಿರಂಗಪಡಿಸಲು  ಸಾಧ್ಯವಿಲ್ಲವೆಂದು ಮಂಡಳಿ ಈ ಹಿಂದೆ ನೀಡಿದ  ಹೇಳಿಕೆಯನ್ನು ತಿರಸ್ಕರಿಸಿದೆ.

ಪರೀಕ್ಷಾ ರೋಲ್ ನಂಬರನ್ನು ಮಂಡಳಿಯ ಆಜ್ಮೀರ್ ವಿಭಾಗಕ್ಕೆ ನೀಡುವಂತೆ ಸಚಿವೆ ಹಾಗೂ ಆಕೆ ಕಲಿತ ದೆಹಲಿಯ ಹೋಲಿ ಚೈಲ್ಡ್ ಆಕ್ಸಿಲಿಯಂ ಶಾಲೆಗೆ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ಆದೇಶಿಸಿದ್ದಾರೆ.

ಮುಂದಿನ 60 ದಿನಗಳೊಳಗಾಗಿ  ದಾಖಲೆಗಳ ಪ್ರಮಾಣೀಕೃತ  ಪ್ರತಿಗಳನ್ನು ಆಯೋಗ  ಪರಿಶೀಲಿಸಬೇಕಿದೆ ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.  “ಶೈಕ್ಷಣಿಕ ಪ್ರಮಾಣಪತ್ರದ ಮಾಹಿತಿಯನ್ನು ಒದಗಿಸುವುದರಿಂದ ಸಂಬಂಧಿಸಿದವರ ಖಾಸಗಿ ಬದುಕನ್ನು ಅತಿಕ್ರಮಿಸಿದಂತಾಗುವುದಿಲ್ಲ. ಸಂಸದೆ ಹಾಗೂ ಸಚಿವೆಯಾಗಿರುವ ಸ್ಮøತಿ ತಮ್ಮ ಶೈಕ್ಷಣಿಕ ಅರ್ಹತೆಯ  ಬಗ್ಗೆ ಅಫಿಡವಿಟ್ ಸಲ್ಲಿಸಿ ತಮ್ಮ ಕರ್ತವ್ಯ ನಿಭಾಯಿಸಬೇಕಿತ್ತು” ಎಂದು ಮಾಹಿತಿ ಆಯುಕ್ತರು ಹೇಳಿದ್ದಾರೆ.

ಸ್ಮøತಿ ಇರಾನಿ ತಾನು ಪಡೆದಿರುವ ಶೈಕ್ಷಣಿಕ ಪದವಿಯ ಬಗ್ಗೆ 2004ರ ಲೋಕಸಭಾ ಚುನಾವಣೆಯ ನಾಮಪತ್ರದಲ್ಲಿ ಹಾಗೂ 2011ರ ರಾಜ್ಯಸಭಾ ಚುನಾವಣೆ ಸಂದರ್ಭ ಸಲ್ಲಿಸಿದ ನಾಮಪತ್ರದಲ್ಲಿ ವಿಭಿನ್ನ ಮಾಹಿತಿ ನೀಡಿದ್ದರೆಂದು ಫ್ರೀಲಾನ್ಸ್ ಪತ್ರಕರ್ತೆಯೊಬ್ಬರು ದೂರು ದಾಖಲಿಸಿದ್ದರು.