ಕ್ರೈಸ್ತರಲ್ಲೂ ಅಸ್ಪøಶ್ಯತೆ ಇದೆ ಎಂದು ಕೊನೆಗೂ ಒಪ್ಪಿದ ಚರ್ಚ್

 

ಭಾರತದಲ್ಲಿರುವ ಕ್ಯಾಥೊಲಿಕ್ ಸಮುದಾಯದ ಒಟ್ಟು 19 ದಶಲಕ್ಷ ಜನರ ಪೈಕಿ 12 ದಶಲಕ್ಷ ದಲಿತರಿದ್ದರೂ ಸಹ ಡಯೋಸಿಸ್ ಆಡಳಿತ ವ್ಯವಸ್ಥೆಯಲ್ಲಿ ದಲಿತರಿಗೆ ಯಾವುದೇ ರೀತಿಯ ಸ್ಥಾನಮಾನಗಳನ್ನು ನೀಡಲಾಗುತ್ತಿಲ್ಲ. ಕ್ಯಾಥೊಲಿಕರ ಧಾರ್ಮಿಕ ಕೇಂದ್ರಗಳಲ್ಲೂ ದಲಿತರ ಪ್ರಾತಿನಿಧ್ಯ ಕನಿಷ್ಠ ಮಟ್ಟದಲ್ಲಿದ್ದು, ಉನ್ನತ ಮಟ್ಟದಲ್ಲಿ ಶೂನ್ಯ ಎನ್ನಬಹುದಾಗಿದೆ.
………………

ಕ್ರೈಸ್ತ ಸಮಾಜದಲ್ಲಿನ ದಲಿತರು ಈಗಲೂ ಅಸ್ಪøಶ್ಯತೆ ಎದುರಿಸುತ್ತಿದ್ದಾರೆ ಎಂದು ಪ್ರಪ್ರಥಮ ಬಾರಿಗೆ ಭಾರತದ ಕ್ಯಾಥೊಲಿಕ್ ಚರ್ಚ್ ಒಪ್ಪಿಕೊಂಡಿದೆ. ಚರ್ಚ್ ಆಡಳಿತದಲ್ಲಿ ಉನ್ನತ ಹಂತಗಳಲ್ಲಿ ದಲಿತರ ಪ್ರಾತಿನಿಧ್ಯ ಬಹುತೇಕ ಶೂನ್ಯ ಎಂದು ಒಪ್ಪಿಕೊಂಡಿರುವ ಚರ್ಚ್, ಕ್ರೈಸ್ತರಲ್ಲಿ ದಲಿತ ಕ್ರೈಸ್ತರ ವಿರುದ್ಧ ತಾರತಮ್ಯವೂ ಹೆಚ್ಚಾಗಿದೆ ಎಂದು ಒಪ್ಪಿಕೊಂಡಿದೆ.
ಭಾರತದ ಕ್ಯಾಥೊಲಿಕ್ ಕ್ರೈಸ್ತ ಸಮುದಾಯವನ್ನು ಪ್ರತಿನಿಧಿಸುವ ಉನ್ನತ ಮಟ್ಟದ ನಿರ್ಣಯ ಕೈಗೊಳ್ಳುವ ಸಮಿತಿ (ಸಿಬಿಸಿಐ) ತನ್ನ ಇತ್ತೀಚಿನ ಸರ್ವ ಸದಸ್ಯರ ಸಮಾವೇಶದಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಂಶಗಳನ್ನು ಸ್ಪಷ್ಟಪಡಿಸಲಾಗಿದೆ. ಈ ನಿಟ್ಟಿನಲ್ಲಿ ಜಾಗೃತವಾಗಿರುವ ಕ್ಯಾಥೊಲಿಕ್ ಸಮುದಾಯ ಸಾಮಾಜಿಕವಾಗಿ ಹಿಂದುಳಿದವರನ್ನು ಒಳಗೊಳ್ಳುವ ನೀತಿಯನ್ನು ಅನುಸರಿಸಲಿದ್ದು, ಈ ಸಮುದಾಯದ ಸಬಲೀಕರಣಕ್ಕಾಗಿ ಕ್ರಮಕೈಗೊಳ್ಳಲಿದೆ.
`ಭಾರತದ ಕ್ಯಾಥೊಲಿಕ್ ಸಮುದಾಯದಲ್ಲಿ ದಲಿತರ ಸಬಲೀಕರಣ’ ಎಂಬ 44 ಪುಟಗಳ ದಸ್ತಾವೇಜು ಬಿಡುಗಡೆ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ದಲಿತರ ವಿರುದ್ಧ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ಮುಂಬರುವ ವರ್ಷದ ಅಲ್ಪಕಾಲಿಕ ಮತ್ತು ದೀರ್ಘಕಾಲಿಕ ಯೋಜನೆಗಳನ್ನು ಸಲ್ಲಿಸುವಂತೆ ದೇಶದಲ್ಲಿರುವ 171 ಡಯೋಸಿಸುಗಳಿಗೆ ಆದೇಶಿಸಲಾಗಿದೆ.
ಸಿಬಿಸಿಐನ ಅಧ್ಯಕ್ಷರಾದ ಬಾಸಿಲಿಯೋಸ್ ಕಾರ್ಡಿನಲ್ ಕ್ಲೀಮಿಸ್ ಕ್ಯಾಥೊಲಿಯೋಸ್ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಇಂತಹ ಕ್ರಾಂತಿಕಾರಿ ಹೆಜ್ಜೆಯನ್ನು ಎಲ್ಲರೂ ಸ್ವಾಗತಿಸಲು ಕರೆ ನೀಡಿದ್ದಾರೆ. ದಲಿತರ ವಿರುದ್ಧ ತಾರತಮ್ಯ ನೀತಿ ಅನುಸರಿಸುವುದು ಸಾಮಾಜಿಕ ಅನಿಷ್ಠವಾಗಿದ್ದು ಜ್ವಲಂತ ಸಮಸ್ಯೆಯಾಗಿದೆ, ಕ್ರೈಸ್ತ ಮತದ ಅನುಯಾಯಿಗಳು ಈ ರೀತಿಯ ತಾರತಮ್ಯವನ್ನು ತಡೆಗಟ್ಟಲು ಶ್ರಮಿಸಬೇಕು ಎಂದು ಅವರು ಹೇಳಿದ್ದಾರೆ.
ದಲಿತ ಕ್ರೈಸ್ತರನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಲು ಕ್ಯಾಥೊಲಿಕ್ ಚರ್ಚ್ ಬಹಳ ವರ್ಷಗಳಿಂದ ಆಗ್ರಹಿಸುತ್ತಿದೆ. ಆದರೆ ಭಾರತದಲ್ಲಿರುವ ಕ್ಯಾಥೊಲಿಕ್ ಸಮುದಾಯದ ಒಟ್ಟು 19 ದಶಲಕ್ಷ ಜನರ ಪೈಕಿ 12 ದಶಲಕ್ಷ ದಲಿತರಿದ್ದರೂ ಸಹ ಡಯೋಸಿಸ್ ಆಡಳಿತ ವ್ಯವಸ್ಥೆಯಲ್ಲಿ ದಲಿತರಿಗೆ ಯಾವುದೇ ರೀತಿಯ ಸ್ಥಾನಮಾನಗಳನ್ನು ನೀಡಲಾಗುತ್ತಿಲ್ಲ. ಕ್ಯಾಥೊಲಿಕರ ಧಾರ್ಮಿಕ ಕೇಂದ್ರಗಳಲ್ಲೂ ದಲಿತರ ಪ್ರಾತಿನಿಧ್ಯ ಕನಿಷ್ಠ ಮಟ್ಟದಲ್ಲಿದ್ದು, ಉನ್ನತ ಮಟ್ಟದಲ್ಲಿ ಶೂನ್ಯ ಎನ್ನಬಹುದಾಗಿದೆ. ದೇಶದಲ್ಲಿರುವ ಒಟ್ಟು 500 ಕ್ಯಾಥೊಲಿಕ್ ಬಿಷಪ್ಪರ ಪೈಕಿ 12 ಮಂದಿ ಮಾತ್ರ ದಲಿತ ಕ್ರೈಸ್ತರಿದ್ದಾರೆ.
ಚರ್ಚ್ ಆಡಳಿತದ ವಿವಿಧ ಹಂತಗಳಲ್ಲಿ ಹಲವಾರು ಸುಧಾರಣೆಗಳನ್ನು ಮಾಡಲಾಗಿದ್ದರೂ ಯುವ ಪೀಳಿಗೆಯ ಜನರು ತಮ್ಮ ಘನತೆ ಮತ್ತು ಗೌರವ ಹೆಚ್ಚು ಬಯಸುವುದರಿಂದ ತಾರತಮ್ಯದ ವಿಧಾನಗಳೂ ಸಹ ಢಾಳಾಗಿ ಕಾಣುತ್ತಿವೆ. ಸೆಮಿನರಿಗಳಲ್ಲಿ ಮತ್ತು ಉನ್ನತ ಮಟ್ಟದ ನೇಮಕಾತಿಯಲ್ಲಿ ದಲಿತ ಕ್ರೈಸ್ತರ ಪ್ರಾತಿನಿಧ್ಯದಲ್ಲಿರುವ ಕೊರತೆ ಮತ್ತು ಧಾರ್ಮಿಕ ಕೇಂದ್ರಗಳ ಸಂಪನ್ಮೂಲಗಳ ಹಂಚಿಕೆಯಲ್ಲಿರುವ ತಾರತಮ್ಯ ಇವೆಲ್ಲವನ್ನೂ ಸರಿಪಡಿಸಿದರೆ ಮಾತ್ರವೇ ದಲಿತ ಕ್ರೈಸ್ತರ ಮೇಲಿನ ದೌರ್ಜನ್ಯ ಮತ್ತು ತಾರತಮ್ಯವನ್ನು ತಡೆಗಟ್ಟಬಹುದು ಎಂದು ಸಮಿತಿ ಹೊರಡಿಸಿರುವ ದಸ್ತಾವೇಜಿನಲ್ಲಿ ಹೇಳಲಾಗಿದೆ.
ದಲಿತರಿಗೆ ಕ್ಯಾಥೊಲಿಕ್ ಸಮಾಜ ನಡೆಸುವ ಶೈಕ್ಷಣಿಕ ಮತ್ತು ಔದ್ಯೋಗಿಕ ಉದ್ಯೋಗಾವಕಾಶಗಳು ಕೂಡ ದಕ್ಕದಂತೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ದಲಿತ ಕ್ರೈಸ್ತರು ಎಷ್ಟೇ ಪ್ರತಿಭಾವಂತರಾಗಿದ್ದರೂ ಕೇವಲ ದಲಿತರು ಎಂಬ ಕಾರಣಕ್ಕೆ ಕ್ರೈಸ್ತ ಸಂಸ್ಥೆಗಳಲ್ಲಿ ಕೀಳರಿಮೆಯಿಂದ ಕಾಣಲಾಗುತ್ತದೆ.
ಕ್ರೈಸ್ತ ಮತದಲ್ಲಿ ಜಾತಿಪ್ರಜ್ಞೆಗೆ ಅವಕಾಶವೇ ಇಲ್ಲ ಎಂದು ದಸ್ತಾವೇಜಿನಲ್ಲಿ ಹೇಳಲಾಗಿದೆ. ಮತಾಂತರದ ನಂತರ ದಲಿತ ಕ್ರೈಸ್ತರು ಯಾವುದೇ ರೀತಿಯ ತಾರತಮ್ಯ ಎದುರಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ಖಂಡಿಸಿರುವ ದಸ್ತಾವೇಜು, ತಮ್ಮ ಧರ್ಮ ಕೇಂದ್ರಗಳಲ್ಲಿ ಯಾವುದೇ ರೀತಿಯ ಜಾತಿ ದೌರ್ಜನ್ಯ ಮತ್ತು ಅಸ್ಪøಶ್ಯತೆಯನ್ನು ಹೋಗಲಾಡಿಸುವಂತೆ ಎಲ್ಲ ಡಯೋಸಿಸುಗಳಿಗೂ ಸಂದೇಶ ರವಾನಿಸಿದೆ.