ಅಪರಿಚಿತ ವಾಹನ ಡಿಕ್ಕಿ : ಚಿತ್ರಾಪಿನ ಯುವಕ ಸಾವು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಕ್ಷೀರಸಾಗರ ಮಿಶನ್ ಕಂಪೌಂಡ್ ಬಳಿಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಚಿತ್ರಾಪಿನ ಯುವಕ ಮೃತಪಟ್ಟಿದ್ದಾರೆ. ಮೃತನನ್ನು ಚಿತ್ರಾಪು ಅಶ್ವಥಕಟ್ಟೆ ನಿವಾಸಿ ದುರ್ಗಾಪ್ರಸಾದ  ಪೂಜಾರಿ (34) ಎಂದು ಗುರುತಿಸಲಾಗಿದೆ.

11byke

ಚಿತ್ರಾಪಿನಿಂದ ಮೂಲ್ಕಿ ಕಡೆಗೆ ಪಲ್ಸರ್ ಬೈಕಿನಲ್ಲಿ ದುರ್ಗಾಪ್ರಸಾದ್ ಬರುತ್ತಿರುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಬೈಕಿನ ನಿಯಂತ್ರಣ ತಪ್ಪಿ ಬೈಕು ಡಿವೈಡರಿಗೆ ಡಿಕ್ಕಿ ಹೊಡೆದು ತಲೆಗೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ಚಿತ್ರಾಪಿನ ದಿ ವೆಂಕಪ್ಪ ಪೂಜಾರಿಯವರ ಮೂವರು ಮಕ್ಕಳಲ್ಲಿ ನಡುವಿನರಾದ ಮೃತ ದುರ್ಗಾಪ್ರಸಾದ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು. ಅವರಿಗೆ ಮದುವೆಯಾಗಿ ಮೂರು ವರ್ಷವಾಗಿದ್ದು ತೊಟ್ಟಿಲ ಮಗು ಇದೆ. ಮೃತರು ಸಾದು ಸ್ವಭಾವರಾಗಿದ್ದು ಸಾವಿನಿಂದ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಸುರತ್ಕಲ್ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.