ಚೀನೀ ಗಾದೆಗಳನ್ನು ಓದಿ, ಜೀವನ ಪರಿಪೂರ್ಣವಾಗಿಸಿ

ಚೀನೀ ಗಾದೆಗಳಲ್ಲಿ ಅಪಾರ ಜ್ಞಾನ ಭಂಡಾರವಿದೆ. ಜನರನ್ನು ಆಕರ್ಷಿಸುವ ಹಾಗೂ ಅವರಿಗೆ ಸ್ಫೂರ್ತಿ ನೀಡುವಂತಹ ಈ ಸರಳ ಹಾಗೂ ಅಷ್ಟೇ ಅರ್ಥಪೂರ್ಣ ಗಾದೆಗಳು ಜನಜೀವನಕ್ಕೆ ಹಲವು ರೀತಿಯಲ್ಲಿ ಉಪಕಾರಿ. ಇಲ್ಲಿವೆ ಕೆಲವು ಜನಪ್ರಿಯ ಚೀನೀ ಗಾದೆಗಳು.

ಕಾರ್ಯಸಾಧನೆ ಕುರಿತು

“ಮರವೊಂದನ್ನು ನೆಡಲು ಅತ್ಯುತ್ತಮ ಸಮಯ 20 ವರ್ಷಗಳ ಹಿಂದೆ. ಎರಡನೇ ಅತ್ಯುತ್ತಮ ಸಮಯ-ಈಗ.”

“ಬದಲಾವಣೆಯ ಗಾಳಿ ಬೀಸುವಾಗ ಕೆಲ ಜನ ಗೋಡೆಗಳನ್ನು ಕಟ್ಟಿದರೆ, ಇನ್ನು ಕೆಲವರು ಗಾಳಿಯಂತ್ರಗಳನ್ನು ನಿರ್ಮಿಸುತ್ತಾರೆ.”

“ನಿಮ್ಮ ಶಿಕ್ಷಕರು ಬಾಗಿಲು ತೆರೆಯಬಹುದು ; ಆದÀರೆ ನೀವಾಗಿಯೇ ಒಳ ಪ್ರವೇಶಿಸಬೇಕು.”

“ಮೆಲ್ಲನೆ ಹೋಗಲು ಅಂಜಬೇಡಿ ; ಸುಮ್ಮನೆ ನಿಂತುಕೊಳ್ಳಲು ಮಾತ್ರ ಅಂಜಬೇಕು.”

“ಹುರಿದ ಬಾತುಕೋಳಿ ಬಾಯಿಯೊಳಗೆ ಬೀಳುತ್ತದೆ ಎಂದು ಕಾಯುವ ಮನುಷ್ಯ ಬಹಳ ಬಹಳ ಹೊತ್ತು ಕಾಯಬೇಕು.”

ಗುರಿ ಸಾಧಿಸುವ ಕುರಿತು

“ಸಾವಿರ ಮೈಲಿಗಳ ಪಯಣ ಒಂದು ಸಣ್ಣ ಹೆಜ್ಜೆಯಿಂದ ಆರಂಭಗೊಳ್ಳುತ್ತದೆ”-

“ಗುಡ್ಡವೊಂದನ್ನು ಅಗೆಯುವವ ಮೊದಲು ಸಣ್ಣ ಸಣ್ಣ ಕಲ್ಲುಗಳನ್ನು ಎತ್ತಿಕೊಳ್ಳುವುದರಿಂದ ಆರಂಭಿಸುತ್ತಾನೆ.”

ಇತರರ ಪರಿವೆಯೇಕೆ ಬೇಡ ?

“ಇತರರು ನಿಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತಾರೆಂದು ಯೋಚನೆ ಮಾಡುತ್ತಾ ಕುಳಿತರೆ ನೀವು ಯಾವತ್ತೂ ಬಂಧಿಯಾಗಿರುತ್ತೀರಿ”

ನಿಜವಾದ ನೀವು

“ನೀವು ಏನಾಗಬೇಕೆಂದು ಯೋಚಿಸುವುದೇ ಒತ್ತಡ. ನೀವು ಏನಾಗಿದ್ದೀರೆಂಬುದೇ ಆರಾಮದಾಯಕ.”

“ಇತರರ ಬಗ್ಗೆ ತಿಳಿದುಕೊಂಡವನು ಜಾಣ. ತನ್ನನ್ನೇ ತಿಳಿದುಕೊಂಡವನು ಪ್ರಬುದ್ಧ.”

ಕಲಿಕೆಯ ಬಗ್ಗೆ

“ನನಗೆ ಹೇಳಿ, ನಾನು ಮರೆತುಬಿಡುತ್ತೇನೆ. ನನಗೆ ತೋರಿಸಿ, ನಾನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ನನ್ನನ್ನು ತೊಡಗಿಸಿಕೊಳ್ಳಿ, ನನಗೆ ಅರ್ಥವಾಗುವುದು.”

“ಪ್ರಶ್ನೆ ಕೇಳುವವ 5 ನಿಮಿಷಗಳ ತನಕ ಮೂರ್ಖನಾದರೆ, ಯಾವುದೇ ಕಾರ್ಯ ಮಾಡದವ ಯಾವತ್ತೂ ಮೂರ್ಖನಾಗಿರುತ್ತಾನೆ.”

ವೈಫಲ್ಯದ ಬಗ್ಗೆ

“ವೈಫಲ್ಯವೆಂದರೆ ಕೆಳಗೆ ಬೀಳುವುದಲ್ಲ, ಮೇಲೇಳಲು ನಿರಾಕರಿಸುವುದು.”

“ಯಶಸ್ಸು ದೊರೆಯುವ ಸ್ವಲ್ಪವೇ ಸಮಯದ ಮೊದಲು ಎಲ್ಲವನ್ನೂ ಕೈಬಿಡಲು ನಿಮಗೆ ಅತ್ಯಂತ ಹೆಚ್ಚು ಮನಸ್ಸಾಗುತ್ತದೆ.”

ಬದುಕಿನ ದೃಷ್ಟಿಕೋನದ ಕುರಿತು

“ನನ್ನ ಬಳಿ ಬೂಟುಗಳಿಲ್ಲವೆಂದು ಸಿಟ್ಟಾಗಿದ್ದೆ. ಆಗ ಕಾಲುಗಳೇ ಇಲ್ಲದ ಮನುಷ್ಯನನ್ನು ಭೇಟಿಯಾದೆ.”

“ಕತ್ತಲೆಗೆ ಶಾಪ ಹಾಕುವ ಬದಲು ಒಂದು ಸಣ್ಣ ಮೇಣದ ಬತ್ತಿ ಉರಿಸುವುದು ಮೇಲು.”

ಜೀವನದ ಕುರಿತು

“ಇಂದಿನ ಬಹುಪಾಲನ್ನು ಕಬಳಿಸಲು ನಿನ್ನೆಗೆ ಬಿಡಬೇಡಿ.”

“ನಿಮ್ಮ ಸಮಸ್ಯೆಗೆ ಪರಿಹಾರವಿದ್ದರೆ ಏಕೆ ಚಿಂತಿಸುತ್ತೀರಿ, ನಿಮ್ಮ ಸಮಸ್ಯೆಗೆ ಪರಿಹಾರವಿಲ್ಲವೆಂದಾದರೆ ಏಕೆ ಚಿಂತಿಸುತ್ತೀರಿ ?”

“ನೀವು ಖಿನ್ನರಾಗಿದ್ದೀರಾದರೆ ನೀವು ಭೂತಕಾಲದಲ್ಲಿ ಬಾಳುತ್ತಿದ್ದೀರಿ. ನೀವು ಆತಂಕಿತರಾಗಿದ್ದೀರಾದರೆ ನೀವು ಭವಿಷ್ಯದಲ್ಲಿ ಬಾಳುತ್ತಿದ್ದೀರಿ. ನೀವು ಶಾಂತಿಯಿಂದಿದ್ದರೆ ನೀವು ವರ್ತಮಾನ ಕಾಲದಲ್ಲಿದ್ದೀರಿ.”

ನೋವಿನ ಬಗ್ಗೆ

“ನೋವಿನ ಹಕ್ಕಿಗಳು ನಿಮ್ಮ ತಲೆ ಮೇಲಿಂದ ಹಾರುವುದನ್ನು ನೀವು ತಡೆಯಲಾರಿರಿ, ಆದರೆ ಅವುಗಳು ನಿಮ್ಮ ಕೂದಲಿನಲ್ಲಿ ಗೂಡು ಕಟ್ಟದಂತೆ ನೀವು ತಡೆಯಬಲ್ಲಿರಿ.”

ಕರ್ಮದ ಕುರಿತು

“ಜೀವನ ಒಂದು ಪ್ರತಿಧ್ವನಿಯಂತೆ. ನೀವು ಕಳುಹಿಸಿದ್ದೇ ನಿಮ್ಮ ಬಳಿ ಹಿಂದಿರುಗಿ ಬರುತ್ತದೆ.”

“ಬೇರೆಯವರಿಗೆ ತಿಳಿಯಬಾರದು ಎಂದು ನಿಮಗನಿಸಿದ್ದರೆ, ನೀವು ಅದನ್ನು ಮಾಡಬೇಡಿ.”

“ನಿಮಗೇ ಇಷ್ಟವಿಲ್ಲದ್ದನ್ನು ಬೇರೆಯವರ ಮೇಲೆ ಹೊರಿಸಬೇಡಿ”

ನಿಮ್ಮ ಪಯಣ ಹಾಗೂ ಉದ್ದೇಶದ ಕುರಿತು

“ಪಕ್ಷಿಯ ಬಳಿ ಉತ್ತರವಿದೆಯೆಂದು ಅದು ಹಾಡುತ್ತಿಲ್ಲ, ತನ್ನ ಬಳಿ ಹಾಡು ಇದೆಯೆಂದು ಅದು ಹಾಡುತ್ತದೆ.”

“ರಸ್ತೆಯಲ್ಲಿ ಪ್ರಯಾಣಿಸಿದವರಿಗೆ ಮಾತ್ರ ಗುಂಡಿಗಳು ಎಷ್ಟು ಆಳವಾಗಿವೆಯೆಂದು ತಿಳಿದಿರುತ್ತದೆ.”

“ಪಯಣವೇ ಬಹುಮಾನ.”