ಭಾರತದ ವಿಷಯದಲ್ಲಿ ಚೀನಾ ಶಾಂತವಾಗಲಿ : ಚೀನಾ ಪತ್ರಿಕೆ

ಬೀಜಿಂಗ್ : ಭಾರತಕ್ಕೆ ಭಾರೀ ಪ್ರಮಾಣದಲ್ಲಿ ವಿದೇಶಿ ಹೂಡಿಕೆ ಒಳಹರಿವು ಪಡೆಯುತ್ತಿದ್ದು, ಅಭಿವೃದ್ಧಿ ವಲಯದಲ್ಲಿ ಉತ್ಪಾದನಾ ಸಾಮಥ್ರ್ಯ ಹೆಚ್ಚಿಸುತ್ತಿದೆ. ಈ ಸಂದರ್ಭದಲ್ಲಿ “ಚೀನಾ ಶಾಂತ ರೀತಿಯಲ್ಲಿ ವರ್ತಿಸಬೇಕು ಮತ್ತು ಹೊಸ ಯುಗದಲ್ಲಿ ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚು ಪ್ರಯತ್ನ ಆರಂಭಿಸಬೇಕು” ಎಂದು ಚೀನಾ ದೇಶದ ಸುದ್ದಿಪತ್ರಿಕೆಯೊಂದು ನಿನ್ನೆ ಸಂಪಾದಕೀಯ ಬರೆದಿದೆ.  “ಉತ್ಪಾದನಾ ಕ್ಷೇತ್ರದಲ್ಲಿ ಯಥೇಚ್ಛ ವಿದೇಶಿ ಹೂಡಿಕೆ ಹರಿದು ಬರುತ್ತಿರುವುದರಿಂದ ಭಾರತದ ಆರ್ಥಿಕತೆ, ಉದ್ಯೋಗ ಮತ್ತು ಔದ್ಯೋಗಿಕ ಅಭಿವೃದ್ಧಿಯಾಗುತ್ತಿದೆ” ಎಂದು ಗ್ಲೋಬಲ್ ಟೈಮ್ಸ್ ಲೇಖನವೊಂದರಲ್ಲಿ ವಿವರಿಸಲಾಗಿದೆ.