`ಭಾರತದ ನಗರಗಳ ಹೆಸರು ಬದಲಿಸುವ ಹಕ್ಕು ಚೀನಾಕ್ಕಿಲ್ಲ’

ನವದೆಹಲಿ : ಭಾರತದ ನಗರಗಳ ಹೆಸರು ಬದಲಿಸುವ ಹಕ್ಕು ಯಾವುದೇ ಹೊರ ರಾಷ್ಟ್ರಗಳಿಗಿಲ್ಲ ಎಂದು ಚೀನಾವು ಏಕಪಕ್ಷೀಯವಾಗಿ ಅರುಣಾಚಲ ಪ್ರದೇಶ ಆರು ಸ್ಥಳಗಳ ಹೆಸರು ಬದಲಿಸಲು ಮುಂದಾಗಿರುವ ಕ್ರಮವನ್ನು ವಿರೋಧಿಸಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಆ ರಾಷ್ಟ್ರಕ್ಕೆ ದಿಟ್ಟ ಉತ್ತರ ನೀಡಿದ್ದಾರೆ. “ದಲಾಯಿ ಲಾಮಾರು ಇತ್ತೀಚೆಗೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಪ್ರತೀಕಾರವಾಗಿ ಚೀನಾವು ಭಾರತದ ಭೌಗೋಳಿಕತೆಯನ್ನು ಬದಲಿಸುವ ಕೆಲಸಕ್ಕೆ ಕೈಹಾಕಿದೆ. ಅರುಣಾಚಲ ಪ್ರದೇಶ ಯಾವತ್ತತಿದ್ದರೂ ಭಾರತದ ಅವಿಭಾಜ್ಯ ಭಾಗ” ಎಂದು ನಾಯ್ಡು ಹೇಳಿದರು.