ಕಮ್ಯುನಿಸ್ಟರಿಂದ ಹಲ್ಲೆಗೊಳಗಾದ ಚೀನಾದ ಕ್ರೈಸ್ತರು

ಬೀಜಿಂಗ್ : ತಮ್ಮ ಚರ್ಚಿನ ಆಸ್ತಿಪಾಸ್ತಿಯನ್ನು ನಾಶಪಡಿಸುವವರಿಂದ ಅದನ್ನು ರಕ್ಷಿಸಲು ಯತ್ನಿಸಿದ ಚೀನಾದ ಉತ್ತರ ಹೇಬೈ ಪ್ರಾಂತ್ಯದ ಕ್ರೈಸ್ತರು ಕಮ್ಯುನಿಸ್ಟ್ ಆಡಳಿತದ ಬಾಡಿಗೆ ಗೂಂಡಾಗಳಿಂದ ಮಾರಣಾಂತಿಕ ಹಲ್ಲೆಗೊಳಗಾದ ಘಟನೆ ನಡೆದಿದೆ.

ಅಲ್ಲಿನ ಫಕ್ಸೆಂಗ್ ಚರ್ಚ್ ತನ್ನ ಭೂಮಿ ಹಸ್ತಾಂತರಿಸಲು ದಾಖಲೆಯೊಂದಕ್ಕೆ ಸಹಿ ಹಾಕಿ ಆ ಮೂಲಕ ಆ ಸ್ಥಳದಿಂದ ಬೇರೆಡೆ ಹೋಗುವಂತೆ ಮಾಡಲು ಕಮ್ಯುನಿಸ್ಟ್ ಪಕ್ಷದ ಅಧಿಕಾರಿಗಳು ಕಳೆದ ವಾರ ಬಲವಂತಪಡಿಸಿದ್ದರೆನ್ನಲಾಗಿದೆ. ಆದರೆ ತಮಗೆ ನೀಡಲಾಗುವ ಪರಿಹಾರದ ಮೊತ್ತ ಅಲ್ಪವಾಗಿದ್ದುದರಿಂದ ಚರ್ಚಿನ ಹಿರಿಯರು ಆ ಸ್ಥಾನ ಬಿಟ್ಟು ಕದಲದಿರಲು ನಿರಾಕರಿಸಿದ್ದರು.

ಇದರಿಂದ ಸಿಟ್ಟುಗೊಂಡ  ಅಧಿಕಾರಿಗಳು ಬಾಡಿಗೆ ಗೂಂಡಾಗಳನ್ನು ಕರೆಸಿ ಚರ್ಚಿನ ಸರ್ಕಿಟ್ ಬ್ರೇಕರ್ ಹಾನಿಗೊಳಿಸಲು ಯತ್ನಿಸಿದ್ದರು. ಚರ್ಚಿನೊಳಗೆ ಕಾರ್ಯನಿರತರಾಗಿದ್ದ ಕ್ರೈಸ್ತರು ಹೊರಗೆ ಓಡಿ ಬಂದು ಅವರನ್ನು ತಡೆಯಲು ಯತ್ನಿಸಿದಾಗ ಹಲ್ಲೆಗೊಳಗಾದ ಪರಿಣಾಮ ಅಲ್ಲಿ ಸಂಘರ್ಷ ಸ್ಥಿತಿಯೂ ಏರ್ಪಟ್ಟಿತ್ತು.