ಅರುಣಾಚಲ ಪ್ರದೇಶದ ಆರು ಸ್ಥಳ ಹೆಸರು ಬದಲಿಸಿದ ಚೀನಾ

ಅರುಣಾಚಲ ಪ್ರದೇಶ : ಭಾರತದ ಪೂರ್ವೋತ್ತರ ರಾಜ್ಯ ಅರುಣಾಚಲ ಪ್ರದೇಶಕ್ಕೆ ದಲಾಯಿ ಲಾಮಾ ಭೇಟಿ ನೀಡಿರುವುದಕ್ಕೆ ಪ್ರತೀಕಾರವಾಗಿ ಚೀನಾ ಏಕಪಕ್ಷೀಯವಾಗಿ ಅರುಣಾಚಲ ಪ್ರದೇಶದ ಆರು ಸ್ಥಳಗಳಿಗೆ ಪುನರ್ ನಾಮಕರಣ ಮಾಡಿದೆ. ಇದು ಈ ಪ್ರದೇಶದ ಮೇಲೆ ಆ ರಾಷ್ಟ್ರದ ಪ್ರಭುತ್ವದ ಪುಷ್ಟೀಕರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಚೀನಾದ ಕಾನೂನಿನಂತೆ ಹೆಸರು ಬದಲಾವಣೆ ಕಾನೂನಬದ್ಧ ಕ್ರಮವಾಗಿದೆ ಎಂದು ಆ ದೇಶದ ವಿದೇಶಾಂಗ ಸಚಿವಾಲಯ ಹೇಳಿದೆ.