ಅಮೆರಿಕಾದತ್ತ ವಾಲಿದರೆ ಜೋಕೆ

ಭಾರತಕ್ಕೆ ಚೀನಾ ಎಚ್ಚರಿಕೆ

ಬೀಜಿಂಗ್ : ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಬೀಜಿಂಗ್ ಹಾಗೂ ವಾಷಿಂಗ್ಟನ್  ನಡುವೆ ನಡೆಯಬಹುದಾದ `ವ್ಯಾಪಾರ ಸಮರ’ದ ನಡುವೆಯೂ ಅಮೆರಿಕದತ್ತ ವಾಲಲು ಭಾರತ ನಡೆಸಬಹುದಾದ ಪ್ರಯತ್ನಗಳು ಅಪ್ರಬುದ್ಧತೆಯ ಲಕ್ಷಣವಾಗಬಹುದು ಎಂದು ಚೀನಾ ಸರಕಾರದ ಮಾಧ್ಯಮ ಎಚ್ಚರಿಸಿದೆ.

“ಸದ್ಯದಲ್ಲಿಯೇ ಅಧಿಕಾರ ವಹಿಸಲಿರುವ ಟ್ರಂಪ್ ನೇತೃತ್ವದ ಸರಕಾರದ ಅಧಿಕಾರಾವಧಿಯಲ್ಲಿ ಭಾರತವು ಅಮೆರಿಕಾದತ್ತ ವಾಲಿದರೆ ದೇಶದ ಆರ್ಥಿಕತೆ ಉನ್ನತಿ ಕಾಣುವುದು ಎಂದು ತಿಳಿದುಕೊಳ್ಳುವುದು ಭಾರತದ ಮುಗ್ಧತೆಯ ಲಕ್ಷಣವಾಗುವುದು” ಎಂದು ಸರಕಾರಿ ನಿಯಂತ್ರಿತ ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಹೇಳಲಾಗಿದೆ. “ಭಾರತ ಮತ್ತು ಅಮೆರಿಕಾದ ನಡುವಣ ಆರ್ಥಿಕ ಸಂಬಂಧಗಳ ಬಗ್ಗೆ ಅತಿಯಾದ ನಿರೀಕ್ಷೆ ಭಾರತವನ್ನು ತಪ್ಪಾದ ಆರ್ಥಿಕ ಹಾದಿಯಲ್ಲಿ ಕೊಂಡೊಯ್ಯುತ್ತದೆ. ನವದೆಹಲಿಯು ಅಭಿವೃದ್ಧಿಯ ಕುರಿತು ವಾಸ್ತವಿಕವಾಗಿ ಯೋಚಿಸಬೇಕು” ಎಂದು ಅದು ಹೇಳಿದೆ.