ಮನೆಗೆಲಸದ ಬಾಲಕಿಗೆ ಚೈಲ್ಡ್ ಲೈನ್ ರಕ್ಷಣೆ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮನೆ ಕೆಲಸಕ್ಕೆ ಬಾಲಕಿಯೊಬ್ಬಳನ್ನು ಬಳಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಚೈಲ್ಡ್ ಲೈನ್ ಕಾರ್ಯಕರ್ತರು ಬಾಲಕಿಯನ್ನು ರಕ್ಷಿಸಿದ ಘಟನೆ ನಗರದಲ್ಲಿ ನಡೆದಿದೆ.

ಶಿವಮೊಗ್ಗ ಮೂಲದ ಹತ್ತು ವರ್ಷದ ಬಾಲಕಿಯನ್ನು ಮನೆ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಚೈಲ್ಡ್ ಲೈನ್ ಸದಸ್ಯರು ಪೆÇಲೀಸರ ನೆರವಿನೊಂದಿಗೆ ನಗರದ ಪಾಂಡೇಶ್ವರ ಬಳಿ ಇರುವ ಮನೆಗೆ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಮಹಮ್ಮದ್ ಎಂಬವರ ಮನೆಯಲ್ಲಿ ಈ ಅಪ್ರಾಪ್ತ ಬಾಲಕಿಯನ್ನು ಅತ್ಯಂತ ನಿಕೃಷ್ಟ ರೀತಿಯಲ್ಲಿ ದುಡಿಸಲಾಗುತ್ತಿತ್ತು.ಇದೀಗ ಬಾಲಕಿಯನ್ನು ಚೈಲ್ಡ್ ಲೈನ್ ಸದಸ್ಯರು ವಶಕ್ಕೆ ಪಡೆದಿದ್ದಾರೆ.

ಬಾಲಕಿಯನ್ನು ಶಾಲೆಗೂ ಕಳುಹಿಸದೇ, ಪೋಷಕರಿಂದ ದೂರ ಮಾಡಿ,  ಮನೆ ಕೆಲಸಕ್ಕೆ ಬಳಸಿಕೊಂಡ ಆರೋಪದ ಮೇಲೆ ಮನೆಯ ಮಾಲಕ ಮಹಮ್ಮದ್ ಅವರನ್ನು ಪೆÇಲೀಸರು ಬಂಧಿಸಿದ್ದಾರೆ. ಚೈಲ್ಡ್ ಲೈನ್ ಪದಾಧಿಕಾರಿಗಳ ದೂರಿನ ಅನ್ವಯ ಪಾಂಡೇಶ್ವರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

 

1 COMMENT

Comments are closed.