ಕಾರು-ಪಿಕಪ್ ಅಪಘಾತದಲ್ಲಿ ಗಾಯಗೊಂಡ ಮಗು ಮೃತ

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಕಾರು ಹಾಗೂ ಪಿಕಪ್ ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಮಗುವೊಂದು ಮೃತಪಟ್ಟಿದೆ.
ಕೋಟಿಕುಳಂ ಪೆಟ್ರೋಲ್ ಪಂಪ್ ಸಮೀಪದ ರೈಸ್ ಮಿಲ್ ಮಾಲಕ ಕೆ ಎ ಸಿದ್ದೀಖ್ ಎಂಬವರ ಪುತ್ರ ಮಿಸ್ಬಾಹ್ (ಮೂರುವರೆ ವರ್ಷ) ಮೃತ ದುರ್ದೈವಿ
ಶುಕ್ರವಾರದಂದು ಪಾಲಕುನ್ನು ನಗರದಲ್ಲಿ ಈ ದುರ್ಘಟನೆ ನಡೆದಿತ್ತು  ಅಪಘಾತದಲ್ಲಿ ಮಗುವಿನ ತಂದೆ ತಾಯಿ ಸಂಬಂಧಿಕರು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದರು.