ವರ್ಷದ ಮಗು ರಸ್ತೆ ಅಪಘಾತದಲ್ಲಿ ಮೃತ ; ಇನ್ನೊಂದು ಗಂಭೀರ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ತಾಲೂಕಿನ ಮಣಿಹಳ್ಳ ಸಮೀಪದ ಬಡಗುಂಡಿ ಎಂಬಲ್ಲಿ ಓಮ್ನಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತ ಪ್ರಕರಣದ ಗಾಯಾಳು ಒಂದು ವರ್ಷ ಪ್ರಾಯದ ಪುಟಾಣಿ ಮಗು ಜಾನ್ ಪೆಟ್ರಿಕ್ ಬರೆಟ್ಟೊ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ತಡ ರಾತ್ರಿ ವೇಳೆಗೆ ಮೃತಪಟ್ಟಿದೆ.

ಇನ್ನೊಂದು ಮಗುವಿನ ಸ್ಥಿತಿ ಇನ್ನೂ ಚಿಂತಾಜನಕವಾಗಿದ್ದು, ಉಳಿದ ಗಾಯಾಳುಗಳಾದ ಬಡಗುಂಡಿ ನಿವಾಸಿಗಳಾದ ಜರ್ಮನ್, ರೋಶನ್,

ಲವಿಟ, ಸಿಸಿಲಿಯಾ ಬರೆಟ್ಟೋ, ಓಮ್ನಿ ಚಾಲಕ ರೋಬಿನ್, ಜಾನ್ ಅಕ್ಕರಿಯಾ ಎಂಬವರು ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ವಿದೇಶದಲ್ಲಿ ಉದ್ಯೋಗಿಯಾಗಿರುವ ರೋಶನ್ ಇತ್ತೀಚೆಗಷ್ಟೆ ಊರಿಗೆ ಬಂದಿದ್ದು, ಕುಟುಂಬಿಕರೊಂದಿಗೆ ಸೇರಿ ಮಂಗಳೂರಿಗೆ ತೆರಳಿ ವಾಪಾಸು ಬರುತ್ತಿದ್ದ ವೇಳೆ ಮಣಿಹಳ್ಳ ಸಮೀಪದ ಬಡಗುಂಡಿ ಎಂಬಲ್ಲಿ ಚಾಲಕನ ನಿಯಂತ್ರಣ ಮೀರಿ ಓಮ್ನಿ ಕಾರು ಮರಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿತ್ತು. ಗಾಯಾಳುಗಳನ್ನು ಸ್ಥಳೀಯರು ಎತ್ತಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದ್ದರು.

 

 

 

LEAVE A REPLY