ಪೊಲೀಸ್ ಗೆಟಪ್ಪಿನಲ್ಲಿ ಚಿಕ್ಕಣ್ಣ

ಚಿಕ್ಕಣ್ಣ ಇದುವರೆಗೂ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಈಗ ಮೊದಲ ಬಾರಿಗೆ ಒಂದು ವಿಭಿನ್ನ ಪಾತ್ರದಲ್ಲಿ ಚಿಕ್ಕಣ್ಣ ನಟಿಸುತ್ತಿದ್ದಾನೆ. `ಸಂಹಾರ’ ಚಿತ್ರದಲ್ಲಿ ಚಿಕ್ಕಣ್ಣ ಪೆÇಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಅಂದ ಹಾಗೆ ಆ ಪಾತ್ರದ ಹೆಸರು ರಾಜಾ ಹುಲಿಯಂತೆ. ಚಿಕ್ಕಣ್ಣ ಈ ಪಾತ್ರಕ್ಕಾಗಿ ದೊಡ್ಡ ಮೀಸೆ ಬಿಟ್ಟಿದ್ದಾನೆ. ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಹೀರೋ. ಸರ್ಜಾಗೆ ಸಿನಿಮಾದಲ್ಲಿ ಸಾಥ್ ನೀಡಲಿದ್ದಾನೆ ಚಿಕ್ಕಣ್ಣ.

ಈ ಚಿತ್ರದಲ್ಲಿ ನಾಯಕಿಯರಾಗಿ ಹರಿಪ್ರಿಯ ಮತ್ತು ಕಾವ್ಯ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಮಂಗಳೂರಿನ ಸುತ್ತಮುತ್ತ ಚಿತ್ರೀಕರಣ ಶುರುವಾಗಿದೆ.