ಪತ್ನಿ, ಪುತ್ರನ ಕೊಂದ ವ್ಯಕ್ತಿ ಪೊಲೀಸರೆದುರು ಶರಣಾಗತಿ

ಸಾಂದರ್ಭಿಕ ಚಿತ್ರ

ಚೆನ್ನೈ : ಬಿಲ್ಡಿಂಗ್ ಗುತ್ತಿಗೆದಾರನೊಬ್ಬ ತನ್ನ ಎರಡನೇ ಪತ್ನಿ ಮತ್ತು ಎರಡು ವರ್ಷದ ಗಂಡು ಮಗುವಿನ ತಲೆಜಜ್ಜಿ ಕೊಲೆಗೈದ ಘಟನೆ ಗುಡೆವಂಚೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಊರಪಾಕ್ಕಂ ಹತ್ತಿರದ ಅಯ್ಯಂಚೀರಿ ಎಂಬಲ್ಲಿ ಮೊನ್ನೆ ನಡೆದಿದೆ. ಬಳಿಕ ಆರೋಪಿ ಪೊಲೀಸರಿಗೆ ಶರಣಾಗತಿಯಾಗಿದ್ದಾನೆ. ಆರೋಪಿ ಲೋಗನಾಥ(43) ಎಂದು ಗುರುತಿಸಲಾಗಿದ್ದು, ಈತ ಬಂಗಾಳದ ದೀಪ್ತಿಯನ್ನು(29) ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ. ಇದಕ್ಕಾತ ಪ್ರಥಮ ಪತ್ನಿಯ ಅನುಮತಿ ಪಡೆದುಕೊಂಡಿದ್ದ. ಪತ್ನಿಯರು ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿದ್ದು, ದೀಪ್ತಿ ಬ್ಯೂಟಿ ಪಾರ್ಲರಿನಲ್ಲಿ ಕೆಲಸ ಮಾಡುತ್ತಿದ್ದಳು.