ಸುರತ್ಕಲ್ ಪೇಟೆಯಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಿ

ಕತ್ತಲು ಕವಿಯುತ್ತಿದ್ದಂತೆ ಸುರತ್ಕಲ್ ಪೇಟೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಇಲ್ಲಿನ ಗೋವಿಂದದಾಸ ಕಾಲೇಜಿನಿಂದ ನಟರಾಜ್ ಟಾಕೀಸುತನಕ ಉದ್ದಕ್ಕೂ ಸಾಲು ಸಾಲು ವಾಹನಗಳು ಅಡ್ಡಾದಿಡ್ಡ್ಡಿ ನಿಲ್ಲಿಸಿ ಸುಧೀರ್ಘ ಅವಧಿಗೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ತುರ್ತು ಕೆಲಸಗಳಿಗೆ ಹೋಗಬೇಕಾದ ಅಂಬ್ಯುಲೆನ್ಸ್ ಟ್ರಾಫಿಕ್ ನಡುವೆ ಸಿಕ್ಕಿ ಹಾಕಿಕೊಂಡರೆ ಅಂಬ್ಯುಲೆನ್ಸನಲ್ಲಿದ್ದವರು ಇಹಲೋಕ ತ್ಯಜಿಸುವು ಖಾತ್ರಿ ಎಂಬಂತಾಗಿದೆ. ಸುರತ್ಕಲ್ ಪೊಲೀಸರು ಸಂಜೆ ವೇಳೆ ಕೃಷ್ಟಾಪುರ-ಕಾಟಿಫಳ್ಳ ಕಡೆ ಹೋಗುವ ಸಾವಿರಾರು ಬುಲೆಟ್ ಟ್ಯಾಂಕರ್‍ಗಳು ಕತ್ತಲು ಕವಿಯುತ್ತದ್ದಂತೆ ರಸ್ತೆಗೆ ಇಳಿಯುತ್ತಿದೆ. ಹಗಲು ಹೊತ್ತು ಲಂಗರು ಹಾಕಿ ಕತ್ತಲು ಕವಿಯುತ್ತಿದ್ದಂತೆ ಓಡಾಡಲು ಆರಂಭಿಸಿದರೆ ಇತರ ವಾಹನಗಳಿಗೆ ಹೋಗಲು ಅವಕಾಶವೇ ಇರುವುದಿಲ್ಲ. ಆದ್ದರಿಂದ ಟ್ರಾಫಿಕ್ ವೃತ್ತಯ ಆಗದಂತೆ ಎಚ್ಚರಿಕೆವಹಿಸಬೇಕಾಗಿದೆ

  • ಚೇತನ್ ಸುವರ್ಣ,  ಇಡ್ಯಾ ಸುರತ್ಕಲ್