ಪುತ್ತೂರು ಜಾತ್ರೆ ಸಮಯ ರಸ್ತೆ ಮಾರಾಟದ ಆಹಾರ ಗುಣಮಟ್ಟ ನಿಯಂತ್ರಿಸಿ

ಇನ್ನೇನು ಸ್ವಲ್ಪ ದಿನಗಳಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಸ್ವಾಮಿಯ ಜಾತ್ರೆಯು ಆರಂಭವಾಗಲಿದೆ. ಜಾತ್ರೆ ಎಂದಾಗ ಹಲವು ಅಂಗಡಿ-ಮುಂಗಟ್ಟುಗಳು ಬರುವುದು ಸಹಜವೇ. ಆದರೆ ಅಲ್ಲಿ ಬರುವ ಗೋಬಿ ಮಂಚೂರಿ, ಜ್ಯೂಸ್, ಚಾಟ್ಸ್, ಕುರುಕುರು ತಿಂಡಿಗಳು ಉತಮ ಗುಣ ಮಟ್ಟದಲ್ಲಿ ಇರಬೇಕಾದದ್ದು ಅಷ್ಟೇ ಮುಖ್ಯವಲ್ಲವೇ  ಹಲವು ಅಂಗಡಿಗಳಲ್ಲಿ ರುಚಿಗಾಗಿ ಟೇಸ್ಟ್ ಫುಡ್, ರಾಸಾಯನಿಕ ಮಿಕ್ಸ್ ಮಾಡಿ ತಯಾರು ಮಾಡುವುದು ಕಳೆದ ಸಲ ತಿಳಿದು ಬಂದಿದೆ. ಈ ಸಲ ಇಂತಹ ಸನ್ನಿವೇಶ ಬರದಂತೆ, ದೇವಸ್ಥಾನದವರು ಹಾಗೂ ನಗರಸಭೆಯವರು ಈ ಬಗ್ಗೆ ಕಣ್ಣಿಡಲಿ, ಇಲ್ಲದಿದ್ದರೆ ಅಪಾಯ ತಪ್ಪಿದಲ್ಲ

  • ರಘುರಾಜ್ ಪುತ್ತೂರು