ರಸ್ತೆಗೆ ಮೀನಿನ ನೀರು ಚೆಲ್ಲಬೇಡಿ

ಸಾಂದರ್ಭಿಕ ಚಿತ್ರ

ಮೀನು ಸಾಗಾಟ ವಾಹನಗಳು ಮೀನಿನ ನೀರನ್ನು ರಸ್ತೆಯಲ್ಲಿ ಚೆಲ್ಲಿಕೊಂಡು ಹೋಗುತ್ತಿರುವುದು  ಅದರ ದುರ್ನಾತ ಎಲ್ಲಾ ಕಡೆಯಲ್ಲೂ ಪಸರಿಸುವುದು ಇದು ನಿನ್ನೆ ಮೊನ್ನೆಯಿಂದಲ್ಲ  ಹಲವು ವರ್ಷಗಳಿಂದ ನಡೆಯುತ್ತಿದೆ  ಬಂದರಿನಿಂದ ಮೀನು ತುಂಬಿಕೊಂಡು ಸಂಚಿರಿಸುವ ಅವೆಷ್ಟೋ ಟ್ರಕ್  ಟೆಂಪೊ  ಮಿನಿ ಮೀನಿನ ಲಾರಿಗಳಲ್ಲಿ ಮಂಜುಗಡ್ಡೆಗಳ ಹುಡಿಯನ್ನು ಸಾಕಷ್ಟು ಹಾಕಿರುವ ಕಾರಣ ಅವು ಕರಗಿ ಹರಿವ ಮೀನಿನ ನೀರು ರಸ್ತೆಯುದ್ಧಕ್ಕೂ ಲಾರಿಗಳು  ಟೆಂಪೊಗಳು ಚೆಲ್ಲಿ ಹೋಗುತ್ತವೆ  ಇದರ ಪರಿಣಾಮ   ಪರಿಸರ ಮಾಲಿನ್ಯವಲ್ಲವೇ   ಜನರೆಲ್ಲ ಮೂಗಿಗೆ ಕೈಯಿಟ್ಟು  ಟವೆಲ್ ಇಟ್ಟು ಈ ದುರ್ನಾತವನ್ನು ಸಹಿಸಿಕೊಂಡು ಹೋಗಬೇಕೆ   ಆರೋಗ್ಯ ದೃಷ್ಟಿಯಿಂದ ಇದು ಸರಿಯೇ   ನಾವೆಲ್ಲ ಕಣ್ಣಿದ್ದೂ ಕುರುಡರಂತೆ ನಟಿಸುವುದು ಮಾತ್ರ ವಿಪರ್ಯಾಸ  ವಾಹನ ಮಾತ್ರ ಅಲ್ಲ  ಈಗ ನಗರದ ಎಲ್ಲಾ ಭಾಗಗಳಲ್ಲೂ ಟೆಂಪೊ  ಸೈಕಲ್‍ಗಳಲ್ಲಿ ಮೀನು ಸಾಗಿಸಲಾಗುತ್ತಿದೆ  ಇವರೆಲ್ಲರೂ ಸಹ ಸೈಕಲ್ ಟ್ಯೂಬ್  ವಾಹನದ ಟ್ಯೂಬ್ ಬಳಸಿ ರಸ್ತೆಗೆ  ಮೀನಿನ ನೀರು ಚೆಲ್ಲುತ್ತಾರೆ  ಇದೆಲ್ಲ ಕಾನೂನಿನ ಉಲ್ಲಂಘನೆ ಅಲ್ಲವೆ  ಈ ಕುರಿತು ಪೊಲೀಸ್ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳುವುದು ಲೇಸು

ಜೆ ಎಫ್ ಡಿ’ಸೋಜ ಅತ್ತಾವರ