ಕೂಳೂರಿನ ಪಡುಕೋಡಿ ಹೊಳೆಬದಿಯಲ್ಲಿ ಗಾಂಜಾನಿರತ ಯುವಕರನ್ನು ನಿಯಂತ್ರಿಸಿ

ನಗರದ ವಿವಿಧ ಕಾಲೇಜುಗಳನ್ನು ವ್ಯಾಸಂಗ ಮಾಡುತ್ತಿರುವ ಕಾಲೇಜ್ ವಿದ್ಯಾರ್ಥಿಗಳು ಮನೆಯಿಂದ ಕಾಲೇಜಿಗೆಂದು ಹೊರಟು ಕ್ಲಾಸಿಗೆ ಚಕ್ಕರ್ ಹಾಕಿ ಬಂಗ್ರಕೂಳೂರು ಪಡುಕೋಡಿ ಗ್ರಾಮದ ಹೊಳೆಬದಿ ಮುಂಜಾನೆಯಿಂದ ಕತ್ತಲು ಕವಿಯುವವರೆಗೆ ಕುಳಿತು ತಾವು ಕರೆದುಕೊಂಡ ಬಂದ ವಿದ್ಯಾರ್ಥಿನಿಯರೊಡನೆ ಗಾಂಜಾ ಎಳೆದು ಅಮಲಿನಲ್ಲಿ ಅಸಭ್ಯ ರೀತಿ ವರ್ತಿಸುತ್ತಾ ಕೇಕೆ ಹಾಕುತ್ತಾ ಸುತ್ತಮುತ್ತ ನಿವಾಸಿಗಳ ತಾಳ್ಮೆ ಪರೀಕ್ಷಿಸುತ್ತಿದ್ದಾರೆ ಈ ಬಗ್ಗೆ ಸುತ್ತಮುತ್ತಲಿನವರು ಅನೇಕ ಬಾರಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಫೋನಾಯಿಸಿ ತಿಳಿಸಿದ್ದರೂ ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಿದ್ದಾರೆಯೇ ವಿನಃ ಗಾಂಜಾ ವ್ಯಸನಿಗಳನ್ನು ಮಟ್ಟ ಹಾಕುವ ಕೆಲಸ ಮಾಡಿಲ್ಲ ಇದರಿಂದ ಇಲ್ಲಿ ಮರ್ಯಾದಸ್ಥ ಹೆಣ್ಣು ಮಕ್ಕಳು ಓಡಾಡಲು ಅಸಹ್ಯ ಪಡುವಂತಾಗಿದೆ  ಹಿಂದೆಲ್ಲ ಕಾವೂರು ಪೊಲೀಸರು ರೌಂಡ್ಸ್ ಹೊಡೆಯುತ್ತಿದ್ದಾಗ ಇಲ್ಲಿಗೆ ಬರುವುದು ಸ್ವಲ್ಪ ಕಡಿಮೆ ಇತ್ತು ಪೊಲೀಸರು ಈಗೀಗ ಹೊಳೆ ಬದಿ ಬರುವುದನ್ನು ಕಡಿಮೆ ಮಾಡಿದ್ದರಿಂದ ಪಡ್ಡೆ ಹುಡುಗರ ಏನೇ ಮಾಡಿದರೂ ನಿಯಂತ್ರಿಸುವವರು ಇಲ್ಲದಂತಾಗಿದೆ ಆದ್ದರಿಂದ ಕೂಡಲೇ ಕಾವೂರು ಪೊಲೀಸರು ಮತ್ತಷ್ಟು ಚುರುಕಾಗಿ ಇಲ್ಲಿಗೆ ಬರುವ ಗಾಂಜಾ ವ್ಯಸನಿಗಳನ್ನು ಮಟ್ಟಹಾಕುವ ಕೆಲಸ ಜರೂರು ಆಗಬೇಕಿದೆ

  • ಪ್ರಫುಲ್ಲಾ ಡಿ’ಸಿಲ್ವಾ  ಪಡುಕೋಡಿ  ಕೂಳೂರು