`ಮಹಿಳೆ ಬಗ್ಗೆ ಇರುವ ಮೈಂಡ್ ಸೆಟ್ ಬದಲಿಸಿಕೋ’

ಇದು ವಿದ್ಯಾ ಬಾಲನ್ ವರದಿಗಾರನೊಬ್ಬನಿಗೆ ನೀಡಿದ ನಯವಾದ ಚಾಟಿಯೇಟು. ವಿದ್ಯಾ ಈಗ ಆಕೆಯ ಮುಂಬರುವ ಚಿತ್ರ `ತುಮ್ಹಾರಿ ಸುಲು’ ಚಿತ್ರದ ಪ್ರಮೋಶನ್ನಿನಲ್ಲಿ ತೊಡಗಿಕೊಂಡಿದ್ದು ಆ ಸಮಯದಲ್ಲಿ ಸಿನಿ ವರಿದಿಗಾರರೊಬ್ಬರು ಆಕೆಯ ತೂಕದ ಬಗ್ಗೆ ಕೇಳಲಾದ ಪ್ರಶ್ನೆಗೆ ವಿದ್ಯಾ ತಿರುಗೇಟು ನೀಡಿ ಆತನ ಬಾಯಿ ಮುಚ್ಚಿಸಿದ್ದಾಳೆ.

ತರಲೆ ವರದಿಗಾರನೊಬ್ಬ ವಿದ್ಯಾಗೆ “ನೀವು ತೂಕ ಇಳಿಸಿಕೊಂಡು ಬಾಡಿಯನ್ನು ಶೇಪಿನಲ್ಲಿಟ್ಟುಕೊಂಡು ಗ್ಲಾಮರಸ್ ರೋಲ್ ಮಾಡುವುದು ಯಾವಾಗ?” ಎಂದು ಕೇಳಿದ್ದಾನೆ. ಅದಕ್ಕೆ ವಿದ್ಯಾ “ನೀವು ಇಂತಹ ಪ್ರಶ್ನೆ ಕೇಳುವ ಮೊದಲು ಮಹಿಳೆಯರ ಬಗ್ಗೆ ನಿಮಗಿರುವ ಮೈಂಡ್ ಸೆಟ್ ಬದಲಿಸಿಕೊಂಡರೆ ಉತ್ತಮ” ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾಳೆ. “ನನಗೆ ಸಿಗುತ್ತಿರುವ ಪಾತ್ರದ ಬಗ್ಗೆ ನನಗೆ ಖುಶಿಯಿದೆ. ಮಹಿಳಾ ಆಧರಿತ ಚಿತ್ರಕ್ಕೂ ತೂಕ ಇಳಿಸಿಕೊಳ್ಳುವುದಕ್ಕೂ ಅದೇನು ಸಂಬಂಧವಿದೆ?” ಎಂದು ಇದೇ ಸಂದರ್ಭದಲ್ಲಿ ವಿದ್ಯಾ ಕೇಳಿದ್ದಾಳೆ.

ವಿದ್ಯಾಳ `ತುಮ್ಹಾರಿ ಸುಲು’ ಚಿತ್ರ ಇದೇ ಶುಕ್ರವಾರ ರಿಲೀಸ್ ಆಗುತ್ತಿದೆ. ಈ ಸಿನಿಮಾ ಮಧ್ಯಮವರ್ಗದ ಮಹಿಳೆಯೊಬ್ಬಳು ರೇಡಿಯೋ ಜಾಕಿಯಾಗಿ ಆಕೆಯ ಜೀವನದ ದಿಕ್ಕೇ ಬದಲಿಸುವ ವಿಭಿನ್ನ ಸ್ಪೂರ್ತಿದಾಯಕ ಸ್ಟೋರಿಲೈನ್ ಹೊಂದಿದೆ.