ಮಹಿಳೆಯ ಅಪಹರಣ ಯತ್ನ ಪ್ರಕರಣ : ಹರ್ಯಾಣ ಬಿಜೆಪಿ ಅಧ್ಯಕ್ಷನ ಪುತ್ರಗೆ ಕಸ್ಟಡಿ

ಚಂಡೀಗಢ : 29 ವರ್ಷದ ಮಹಿಳೆಯನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಹರ್ಯಾಣದ ಬಿಜೆಪಿ ಅಧ್ಯಕ್ಷ ಸುಭಾಷ್ ಬರ್ನಾಲಾರ ಪುತ್ರ ವಿಕಾಸ್ ಮತ್ತು ಆತನ ಗೆಳೆಯ ಆಶೀಶ್ ಕುಮಾರಗೆ ಇಲ್ಲಿನ ಕೋರ್ಟೊಂದು ಆಗಸ್ಟ್ 25ರವರೆಗೆ ನ್ಯಾಯಾಂಗ ಕಸ್ಟಡಿ ನೀಡಿದೆ. ಪೊಲೀಸ್ ಬಂದೋಬಸ್ತಿನಲ್ಲಿ ಇಬ್ಬರನ್ನೂ ನಿನ್ನೆ ಮ್ಯಾಜಿಸ್ಟ್ರೇಟ್ ಗೌರವ್ ದತ್ತರ ಎದುರು ಹಾಜರುಪಡಿಸಲಾಯಿತು. ಇಬ್ಬರೂ ಆಗಸ್ಟ್ 12ರವರೆಗೆ ಪೊಲೀಸ್ ಕಸ್ಟಡಿ ಅನುಭವಿಸಿದ್ದರು.