ಸರಗಳ್ಳ ಪೊಲೀಸ್ ಬಲೆಗೆ

ಸಾಂದರ್ಭಿಕ ಚಿತ್ರ

 

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಮಹಿಳೆ ಕತ್ತಿನಿಂದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ ಕಳ್ಳನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಬೋಳಿಯಾರ್ ನಿವಾಸಿ ನವಾಝ್ (21) ಎಂದು ಹೆಸರಿಸಲಾಗಿದೆ. ಸಜಿಪಮೂಡ ಗ್ರಾಮದ ಬೇಂಕೆ ಎಂಬಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಲಾಗಿದೆ. ಆರೋಪಿ ಎಗರಿಸಿದ್ದ ಚಿನ್ನದ ಸರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕಳ್ಳಿಗೆ ಗ್ರಾಮದ ತಡಂಬಿಲ ಶಾಲಾ ಬಳಿಯ ನಿವಾಸಿ ಮಹಿಳೆ ರೀಟಾ ಮೊಂತೇರೋ ಎಂಬವರು ಕಳೆದ ಭಾನುವಾರ ಇಲ್ಲಿನ ಹಾಲಿನ ಡೈರಿಗೆ ಹಾಲು ನೀಡಿ ವಾಪಾಸು ಬರುತ್ತಿದ್ದ ವೇಳೆ ಬೈಕಿನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ಯುವಕರು ಈಕೆಯ ಕತ್ತಿನಿಂದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದರು.