ಬಸ್ಸಿನಲ್ಲಿ ಬಂಗಾರದ ಸರ ಕದ್ದ ಯುವತಿ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತೊಕ್ಕೊಟ್ಟಿನಿಂದ ಕಂಕನಾಡಿಯತ್ತ ಬರುತ್ತಿದ್ದ ಬಸ್ಸಿನಲ್ಲಿ ಮಹಿಳೆಯೊಬ್ಬರ ಬಂಗಾರದ ಚೈನ್ ಕಳವು ಮಾಡಿ ಪರಾರಿಯಾಗಿದ್ದ ಕಳ್ಳಿ ತಮಿಳುನಾಡು ಮೂಲದ ನಂದಿನಿ ಯಾನೆ ಉಮಾ ಯಾನೆ ಸಂಗೀತಾ(20)ಳನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

ಗುರುವಾರದಂದು ಕಂಕನಾಡಿ ನಿವಾಸಿ ಅವಿನಾಶಿ ಎಂಬವರು ತಮ್ಮ ನಾಲ್ಕು ವರ್ಷದ ಮಗುವಿನೊಂದಿಗೆ ಬಸ್ಸಿನಲ್ಲಿ ಕುಳಿತುಕೊಂಡಿದ್ದ ವೇಳೆ ನಂದಿನಿ ಈಕೆಯ ಬಳಿ ಒರಗಿ ನಿಂತುಕೊಂಡಿದ್ದಳು. ಬಳಿಕ ಸಮಯ ನೋಡಿ ಅವಿನಾಶಿ ಕುತ್ತಿಗೆಗೆ ಕೈಹಾಕಿ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಳು. ಆಕೆಯೇ ಚಿನ್ನದ ಸರವನ್ನು ಕದ್ದುಕೊಂಡು ಹೋಗಿದ್ದು ಎಂದು ಖಚಿತಪಡಿಸಿದ್ದ ಅವರು ಕಂಕನಾಡಿ ಪೊಲೀಸರಿಗೆ ದೂರು ನೀಡಿದ್ದರು.