ಪಿ ಎಫ್ ಐ ಮೇಲೆ ನಿಷೇಧ ಹೇರಲು ಕೇಂದ್ರ ಚಿಂತನೆ ?

ಬೆಂಗಳೂರು : ಮುಸ್ಲಿಂ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯರು ಹಲವಾರು ಕೊಲೆ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪ ಹಾಗೂ ಸಂಘಟನೆ ಮತೀಯ ಸಾಮರಸ್ಯವನ್ನು ಕದಡಲು ಯತ್ನಿಸುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಸಂಘಟನೆಯ ಮೇಲೆ ಸಂಪೂರ್ಣ ನಿಷೇಧ ಹೇರುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆಯೆನ್ನಲಾಗಿದೆ.
ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಈ ಸಂಘಟನೆಯ ವಿಚಾರದಲ್ಲಿ ಹಲವಾರು ಮಹತ್ವದ ಮಾಹಿತಿಗಳನ್ನು ರಾಷ್ಟ್ರೀಯ ತನಿಖಾ ಏಜನ್ಸಿಯಿಂದ ಪಡೆದುಕೊಂಡಿದ್ದು ಸದ್ಯವೇ ಅದನ್ನು ನಿಷೇಧಿಸುವ ಕುರಿತಾದ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಕೇರಳ ಹಾಗೂ ಕರ್ನಾಟಕದಲ್ಲಿನ ಇತ್ತೀಚಿಗಿನ ಬೆಳವಣಿಗೆಗಳನ್ನು ಆಧರಿಸಿ ಇಂತಹ ಒಂದು ಕ್ರಮದ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

“ಈ ಸಂಘಟನೆಯ ಕೆಲ ಕಾರ್ಯಕರ್ತರು ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದಾರೆ ಹಾಗೂ ಬಲಪಂಥೀಯ ಒಲವು ಹೊಂದಿರುವವರ ಮೇಲೆ ದಾಳಿ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಸಂಘಟನೆಯು ಶಾಂತಿ ಕದಡುವ ಯತ್ನಗಳನ್ನೂ ನಡೆಸುತ್ತಿದೆ ಎಂದು ತಿಳಿದು ಬಂದಿದೆ” ಎಂದು ತಮ್ಮ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಂಘಟನೆಯ ಕಾರ್ಯಕರ್ತರ ವಿರುದ್ದವಿರುವ ಪ್ರಕರಣಗಳ ಬಗೆಗಿನ ವಿಸ್ತøತ ವರದಿಯನ್ನು ಈಗಾಗಲೇ ಕೇಂದ್ರಕ್ಕೆ ನೀಡಲಾಗಿದೆಯೆನ್ನಲಾಗಿದೆ.
ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕೆಲ ವಾರಗಳ ಮುಂಚಿತವಾಗಿ ಪಿಎಫ್‍ಐ ಮೇಲೆ ಕೇಂದ್ರವು ನಿಷೇಧ ಹೇರುವ ಸಾಧ್ಯತೆಯಿದೆಯೆನ್ನಲಾಗಿದ್ದು ಇದು ಬಿಜೆಪಿಗೆ ಇನ್ನಷ್ಟು ಹಿಂದು ಮತಗಳನ್ನು ಸೆಳೆಯಲು ಸಹಾಯ ಮಾಡಲಿದೆಯೆಂದೂ ಭಾವಿಸಲಾಗಿದೆ.

LEAVE A REPLY