ಕಂಬಳ ನಿಷೇಧ ತೆರವಿಗೆ ಕೇಂದ್ರದಿಂದ ಸ್ಪಂದನೆ

ಸಚಿವ ರವಿಶಂಕರ್ ಪ್ರಸಾದ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಜಲ್ಲಿಕಟ್ಟು ನಿಷೇಧಾಜ್ಞೆಯನ್ನು ತೆರವುಗೊಳಿಸಲು ತಮಿಳುನಾಡು ಸರಕಾರವು ಕೈಗೊಂಡಿರುವ ನಿರ್ಧಾರದಂತೆಯೇ ಕರ್ನಾಟಕವೂ ಕಂಬಳದ ವಿಷಯದಲ್ಲಿ ಪ್ರಯತ್ನಿಸಿದರೆ ಕೇಂದ್ರ ಸರಕಾರವು ಅದಕ್ಕೆ ಸ್ಪಂದಿಸಲಿದೆ” ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.

ಮಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಕಂಬಳದ ಬಗ್ಗೆ ಕೋರ್ಟಿನಲ್ಲಿ ತಡೆಯಾಜ್ಞೆ ಇರುವ ಕಾರಣಕ್ಕಾಗಿ ತಮಿಳುನಾಡು ಸರಕಾರವು ಕೈಗೊಂಡ ರೀತಿಯಲ್ಲಿಯೇ ಇದೇ ರೀತಿ ಮಂಗಳೂರಿನಲ್ಲೂ ಪ್ರತಿಭಟನೆ ನಡೆಸುವುದು ಹೆಚ್ಚು ಸೂಕ್ತ” ಎಂದವರು ಹೇಳಿದರು.

ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ನಡೆದುಕೊಂಡು ಬರುತ್ತಿದ್ದ ಸಾಂಪ್ರದಾಯಿಕ ಜನಪದ ಕ್ರೀಡೆ ಕಂಬಳವನ್ನು ನಡೆಸುವುದಕ್ಕೆ ಮತ್ತೆ ಅವಕಾಶವನ್ನು ಮಾಡಿಕೊಡಬೇಕು. ಕಂಬಳ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಸಂಸದ ನಳಿನ್, ಬಿಜೆಪಿ ದ ಕ ಜಿಲ್ಲಾಧ್ಯಕ್ಷ ಸಂಜೀವ್ ಮಠಂದೂರು, ಮಾಜಿ ಎಂ ಎಲ್ ಸಿ ಮೋನಪ್ಪ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.