ಕುಮಾರವ್ಯಾಸ ಲಕ್ಷ್ಮೀಶರ ಜಯಂತಿ ಆಚರಿಸಲು ಮನವಿ

ರಾಜ್ಯ ಸರಕಾರವು ಕವಿ ಕುಮಾರವ್ಯಾಸ, ಲಕ್ಷ್ಮೀಶ ಮುಂತಾದ ಕನ್ನಡದ ಶ್ರೇಷ್ಠ ಕವಿ ಸಾಹಿತಿಗಳ ಜಯಂತಿಯನ್ನು ಏಕೆ ಆಚರಿಸುತ್ತಿಲ್ಲ ಶುಕ ಋಷಿಯ ಅವತಾರವೆನಿಸಿದ ಕುಮಾರವ್ಯಾಸನದ್ದು ಕನ್ನಡಕ್ಕೆ ಕೊಡುಗೆ ಅಪಾರವಾದುದು ಆ ಕವಿವಾಣಿಯನ್ನು ಮುಂದಿನ ಕನ್ನಡ ಕುವರರಿಗೆ ತಿಳಿಸುವ ಕಾರ್ಯವಾಗಬೇಕು 70 ವರ್ಷದ ಹಿಂದೆ ನಮ್ಮ ಕನ್ನಡ ಪಠ್ಯ ಪುಸ್ತಕದಲ್ಲಿ ಕುಮಾರವ್ಯಾಸ ಪದಗಳ ವಿವರಣೆ ಬಂದಿದ್ದವು ಆದರೆ ಇತ್ತೀಚಿನ ಹುಡುಗರಿಗೆ ಕವಿ ಕುಮಾರವ್ಯಾಸ ಯಾರು ಎಂತು ಗೊತ್ತಿಲ್ಲ ಪಠ್ಯಪುಸ್ತಕಗಳಲ್ಲಿ ಕವಿವಾಣಿ ಬಂದಿಲ್ಲವೆಂದು ಹೇಳುತ್ತಾರೆ ಈಗಿನ ಪಠ್ಯ ಇಲಾಖೆಯವರು ಕವಿವಾಣಿ ದಾಸವಾಣಿ ಕನ್ನಡ ಪಠ್ಯ ಪುಸ್ತಕಕ್ಕೆ ಬರುವಂತೆ ಮಾಡಬೇಕು ಕುಮಾರವ್ಯಾಸ ಭಾರತ ಕಥಾ ಮಂಜರಿ ಗ್ರಂಥಗಳು ಸಿಗುತ್ತಿಲ್ಲ ಆ ಬಗ್ಗೆ ನಮ್ಮ ಬಂಧುವಾದ ಕನ್ನಡ ಪರಿಷತ್ ಅಧ್ಯಕ್ಷರಾಗಿದ್ದ ಪುಂಡಲಿಕ ಹಾಲಂಬಿಯವರಿಗೆ 2015ರಲ್ಲಿ ಹೇಳಿದಾಗ ಅವರು ಗ್ರಂಥ ಪ್ರಕಟಣೆ 1000 ಪ್ರತಿ ಮಾಡಿರುತ್ತಾರೆ ಆದರೆ ಆ ಪ್ರತಿ ಈಗ ಸಿಗುತ್ತಿಲ್ಲ ತಾಳೆಗರಿ ಪ್ರತಿ ಹಳೆ ಕಾಲದವು ಮುಂದೆ ಬಾಳಿಕೆಗೆ ಬರಲಾರರವು ತಾಮ್ರ ಶಾಸನ ಮಾಡಿ ಸರಕಾರ ಪ್ರಕಟಣೆ ಮಾಡಬೇಕು ಶಾಶ್ವತ ಗ್ರಂಥವನ್ನು ಕಾಪಾಡಿದಂತೆ ಆಗುತ್ತದೆ ಹಾಗೆಯೇ ಕನ್ನಡ ದಿನಪತ್ರಿಕೆಯವರು ಕವಿವಾಣಿ ವಿಭಾಗದಲ್ಲಿ ಕುಮಾರವ್ಯಾಸ ಪದ್ಯ ದಿನ ಪ್ರಸಾರವಾಗಬೇಕು ಓದುಗರಿಗೆ ಇದರ ಲಾಭ ಸಿಗಬೇಕು ಕುಮಾರವ್ಯಾಸನ ಹಾಗೇ ಶ್ರೀ ಕೃಷ್ಣ ಕಥೆಯನ್ನು ಆತಿ ಮನೋಜ್ಞವಾಗಿ ಹೇಳುವವರು ಕನ್ನಡ ನಾಡಿನಲ್ಲಿ ಹುಟ್ಟಿಲ್ಲ ಇನ್ನು ಹುಟ್ಟುವುದೂ ಇಲ್ಲ

  • ಗುಂಡ್ಮಿ ಮಹಾಬಲೇಶ್ವರಯ್ಯ  ದೊಡ್ಡಮನೆ